ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದರ ಕುರಿತು ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಿದ್ದು, ‘ಇದು ಸಾಮಾನ್ಯ ತೀರ್ಪು ಅಲ್ಲ’ ಎಂದು ಹೇಳಿದ್ದಾರೆ.
ಸುದ್ದಿಸಂಸ್ಥೆ ‘ಎಎನ್‌ಐ’ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಕೇಜ್ರಿವಾಲ್‌ಗೆ ದೊರತಿರುವ ಮಧ್ಯಂತರ ಜಾಮೀನು ‘ಇದು ಸಾಮಾನ್ಯ ತೀರ್ಪು ಅಲ್ಲ’ ಎಂದು ನಾನು ನಂಬುತ್ತೇನೆ.ಆದರೆ, ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ‘ವಿಶೇಷ ತೀರ್ಪು’ ನೀಡಿದೆ ಎಂದು ದೇಶದ ಬಹಳಷ್ಟು ಜನರು ನಂಬುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ವೇಳೆ ಮೋದಿ ಬದಲಾವಣೆ ಕುರಿತು ಹೇಳಿಕೆ ಕೊಟ್ಟ ಕೇಜ್ರಿವಾಲ್ ಗೆ ತಿರುಗೇಟು ಕೊಟ್ಟ ಶಾ , ಅರವಿಂದ ಕೇಜ್ರಿವಾಲ್ ಅವರೇ, ನಿಮಗೊಂದು ಕೆಟ್ಟ ಸುದ್ದಿ ಇದೆ… 2029ರ ವರೆಗೆ ನರೇಂದ್ರ ಮೋದಿ ಅವರೇ ದೇಶದ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. 2029ರ ನಂತರವೂ ಪ್ರಧಾನಿ ಮೋದಿಯೇ ನಮ್ಮನ್ನು ಮುನ್ನಡೆಸುತ್ತಾರೆ ಎಂದು ತಿಳಿಸಿದ್ದಾರೆ.
ಮುಸ್ಲಿಮರ ವೋಟ್‌ಬ್ಯಾಂಕ್‌ಗೆ ಧಕ್ಕೆ
ಇನ್ನು ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಸಮಾರಂಭವನ್ನು ಇಡೀ ‘ಇಂಡಿಯಾ ಒಕ್ಕೂಟ’ ಬಹಿಷ್ಕರಿಸಿತ್ತು. ಮುಸ್ಲಿಮರ ವೋಟ್‌ಬ್ಯಾಂಕ್‌ಗೆ ಹೆದರಿ ಅವರು ಈ ರೀತಿ ನಡೆದುಕೊಂಡಿದ್ದಾರೆ. ಮುಸ್ಲಿಮರೊಂದಿಗೆ ‘ಈದ್’ ಆಚರಿಸಲು ಇಂಡಿಯಾ ಒಕ್ಕೂಟ ನಾಯಕರಿಗೆ ಯಾವುದೇ ಸಮಸ್ಯೆಗಳಿಲ್ಲ. ಆದರೆ, ಹಿಂದುಗಳಾಗಿದ್ದರೂ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ. ಏಕೆಂದರೆ ಮುಸ್ಲಿಮರ ವೋಟ್‌ಬ್ಯಾಂಕ್‌ಗೆ ಧಕ್ಕೆಯಾಗುತ್ತದೆ. ಇದು ಯಾವ ರೀತಿಯ ರಾಜಕೀಯ ಎಂದು ವಿಪಕ್ಷ ನಾಯಕರ ವಿರುದ್ಧ ಶಾ ಗುಡುಗಿದ್ದಾರೆ.