ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಿಡುಗಡೆಗೊಳಿಸಲು ಕಸರತ್ತು ನಡೆಸಲಾಗುತ್ತಿದೆ .
ಕೇಜ್ರಿವಾಲ್ ಅವರ ಬಂಧನ ಹಾಗೂ ಸೆರೆಮನೆ ವಾಸ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಕೇಜ್ರಿವಾಲ್ ಅವರಿಗೆ ಅಸಾಧಾರಣ ಮಧ್ಯಮಂತರ ಜಾಮೀನು ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಗರಂ ಆಗಿದೆ. ಇದು ವಿಚಾರಣೆಗೆ ಯೋಗ್ಯವಾದ ಅರ್ಜಿಯಲ್ಲ. ವ್ಯಕ್ತಿ ಉನ್ನತ ಸ್ಥಾನದಲ್ಲಿದ್ದಾರೆ ಅನ್ನೋ ಕಾರಣಕ್ಕೆ ಅಸಾಧಾರಣ ಮಧ್ಯಂತರ ಜಾಮೀನು ನೀಡಲು ಸಾಧ್ಯವಿಲ್ಲ ಎಂದಿದೆ.
ನಾಲ್ಕನೇ ವರ್ಷದ ಕಾನೂನು ವಿದ್ಯಾರ್ಥಿ ನಾವು ಭಾರತೀಯರು ಅನ್ನೋ ಹೆಸರಿನಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯಲ್ಲಿ ಜೈಲಿನಲ್ಲಿರುವ ಅರವಿಂದ್ ಕೇಜ್ರಿವಾಲ್ ಜೀವಕ್ಕೆ ಅಪಾಯವಿದೆ. ಕಾರಣ ಜೈಲಿನಲ್ಲಿ ಹಂತಕರು, ಕಳ್ಳರು, ಅಪರಾಧಿಗಳು ಇದ್ದಾರೆ. ಇವರ ನಡುವೆ ಮುಖ್ಯಮಂತ್ರಿಯನ್ನು ಇರಿಸಲಾಗಿದೆ. ಮುಖ್ಯಮಂತ್ರಿ ಕೇಜ್ರಿವಾಲ್ ಜೈಲಿನಲ್ಲಿರುವುದು ಅಪಾಯಕ್ಕ ಅಹ್ವಾನ ನೀಡಿದಂತೆ ಎಂದು ಉಲ್ಲೇಖಿಸಲಾಗಿತ್ತು.
ಕೇಜ್ರಿವಾಲ್ ವಿರುದ್ಧ ಆರೋಪ, ದಾಖಲೆಗಳನ್ನು ಪರಿಶೀಲಿಸಿ ಅವರನ್ನು ಇಡಿ ಕಸ್ಟಡಿ ಹಾಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನ್ಯಾಯಾಲಯವನ್ನು ರಾಜಕೀಯ ವೇದಿಕೆಗೆ ಬಳಸಿಕೊಳ್ಳಬಾರದು ಎಂದು ಕೋರ್ಟ್ ಖಡಕ್ ಸೂಚನೆ ನೀಡಿದೆ.
ಇದೇ ವೇಳೆ ಇಂತಹ ಅರ್ಜಿಗಳನ್ನು ಪುರಸ್ಕರಿಸಿಲು ಸಾಧ್ಯವಿಲ್ಲ. ಕೋರ್ಟ್ ಗಂಭೀರತೆಯನ್ನು ಅರಿಯದ ಈ ಅರ್ಜಿದಾರರಿಗೆ 75,000 ರೂಪಾಯಿ ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.
ಇದರ ಜೊತೆಗೆ ಅರ್ಜಿ ಸಲ್ಲಿಸಿದ ಕಾನೂನು ವಿದ್ಯಾರ್ಥಿ, ಸರಿಯಾಗಿ ತರಗತಿಗ ಹಾಜರಾಗಿದ್ದಾನಾ? ಹಾಜರಾತಿ ಎಷ್ಟಿದೆ? ಎಂದು ಕೋರ್ಟ್ ಪ್ರಶ್ನಿಸಿದೆ. ಈ ಅರ್ಜಿ ನೋಡಿದರೆ ವಿದ್ಯಾರ್ಥಿ ಕಾನೂನಿನ ಮೌಲ್ಯಗಳ ಕುರಿತು ಸರಿಯಾಗಿ ತಿಳಿದಿಕೊಂಡಿಲ್ಲ. ಕೋರ್ಟ್ ಸಮಯ ಹಾಳುಮಾಡಲು ಇಂತಹ ಅರ್ಜಿಗಳನ್ನು ಹಾಕಲಾಗುತ್ತಿದೆ ಎಂದು ದೆಹಲಿ ಹೈಕೋರ್ಟ್ ಗರಂ ಆಗಿದೆ.
3 person request to delhi high Court for remove kejriwal from CM post, but why not put a fine? All are equal in our country very bad.