ಪಂಜಾಬ್ ಸಿಎಂ ಭಗವಂತ್ ಮಾನ್ ನಿವಾಸದಲ್ಲಿ ಕೇಜ್ರಿವಾಲ್ ಮಗಳ ಮದುವೆ: ಬಿಜೆಪಿ, ಕಾಂಗ್ರೆಸ್ ಗರಂ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಅಧಿಕೃತ ನಿವಾಸವಾದ ಕಪುರ್ತಲಾ ಹೌಸ್‌ನಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಗಳ ಮದುವೆಅದ್ದೂರಿಯಾಗಿ ನಡೆದಿದ್ದು, ಇದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪಂಜಾಬ್ ಬಿಜೆಪಿ ಅಧ್ಯಕ್ಷ ಸುನಿಲ್ ಜಾಖರ್ ಅವರು ಸಿಎಂ ಅವರ ಅಧಿಕೃತ ನಿವಾಸ ಈಗ ‘ಪ್ರತಿಷ್ಠಿತರ ವಿವಾಹ ಅರಮನೆ’ಯಾಗಿದೆ ಎಂದು ಟೀಕಿಸಿದ್ದಾರೆ.

ಇನ್ನು ವಿರೋಧ ಪಕ್ಷದ ನಾಯಕ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪರ್ತಪ್ ಸಿಂಗ್ ಬಜ್ವಾ ಅವರು, ‘ರೋಮ್ ಹೊತ್ತಿ ಉರಿಯುವಾಗ ನೀರೋ ಪಿಟೀಲು ನುಡಿಸುತ್ತಿದ್ದರು’ ಪಂಜಾಬ್ ಸಿಎಂ ಮಾನ್ ಅವರನ್ನು ಟೀಕಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರ ಪುತ್ರಿ ಹರ್ಷಿತಾ ಅವರು ನಿನ್ನೆ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತಮ್ಮ ಕ್ಲಾಸ್ ಮೇಟ್ ಸಂಭವ್ ಜೈನ್ ಅವರೊಂದಿಗೆ ದೆಹಲಿಯ ಪಂಜಾಬ್ ಸಿಎಂ ನಿವಾಸದಲ್ಲಿ ವಿವಾಹವಾದರು.

ದೆಹಲಿಯ ಪಂಜಾಬ್ ಮುಖ್ಯಮಂತ್ರಿಯ ಅಧಿಕೃತ ನಿವಾಸವಾದ ಕಪುರ್ತಲಾ ಹೌಸ್‌ನಲ್ಲಿ ಈ ಖಾಸಗಿ ಕಾರ್ಯಕ್ರಮ ನಡೆಯಿತು. ಈ ಹಿಂದೆ 2023 ರ ಮೇ ತಿಂಗಳ ಆರಂಭದಲ್ಲಿ, ಎಎಪಿ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಮತ್ತು ನಟಿ ಪರಿಣಿತಿ ಚೋಪ್ರಾ ಅವರ ನಿಶ್ಚಿತಾರ್ಥ ಸಮಾರಂಭ ಇಲ್ಲಿಯೇ ನಡೆದಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!