ಸಾಮಾಗ್ರಿಗಳು
ಕೆಂಪಕ್ಕಿ
ಉದ್ದಿನಬೇಳೆ
ಕಡ್ಲೆಬೇಳೆ
ಮೆಂತ್ಯೆ
ಉಪ್ಪು
ಅವಲಕ್ಕಿ
ಮಾಡುವ ವಿಧಾನ
ಒಂದು ಲೋಟ ಅಕ್ಕಿಗೆ ಕಾಲು ಲೋಟ ಉದ್ದಿನಬೇಳೆ, ಕಾಲು ಲೋಟ ಕಡ್ಲೆಬೇಳೆ ಹಾಕಿ
ನಂತರ ಒಂದು ಹಿಡಿ ಮೆಂತ್ಯೆ ಹಾಕಿ ನೀರಿನಲ್ಲಿ ತೊಳೆದು ನೆನೆಸಿ ಇಡಿ
ನಾಲ್ಕು ಗಂಟೆ ನೆನೆದ ನಂತರ ಅವಲಕ್ಕಿ ಹಾಗೂ ಉಪ್ಪು ಹಾಕಿಕೊಂಡು ರುಬ್ಬಿ
ಇದನ್ನು ಇಡೀ ರಾತ್ರಿ ಬಿಡಿ
ಮರುದಿನ ಬೆಳಗ್ಗೆ ಕಾದ ಹೆಂಚಿಗೆ ಹಿಟ್ಟು ಹರಡಿ ಬಿಸಿ ಬಿಸಿ ದೋಸೆ ತಿನ್ನಿ