Saturday, December 2, 2023

Latest Posts

ಈ ವಿಷಯದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದಲ್ಲೇ ಬೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ವಿಷಯದಲ್ಲಿ ನಮ್ಮ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣ ವಿಶ್ವದಲ್ಲೇ ಅತ್ಯುತ್ತಮವಾಗಿದೆ.

Bangalore Kempegowda International Airport Guideಹೌದು, ಯಾವ ವಿಷಯದಲ್ಲಿ ಅಂತೀರಾ? ಸಮಯಪಾಲನೆಯಲ್ಲಿ! ಜಾಗತಿಕ ಅತ್ಯಂತ ಸಮಯಪಾಲನೆ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಗ್ರ ಸ್ಥಾನದಲ್ಲಿದೆ.

Bengaluru Airport: A walk-through the new Terminal 2 of Bengaluru's  Kempegowda International Airport, ET TravelWorldಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಗಳ ಆನ್‌ಟೈಮ್ ನಿರ್ಗಮನ ಜುಲೈನಲ್ಲಿ ಶೇ. 87.51, ಆಗಸ್ಟ್‌ನಲ್ಲಿ ಶೇ. 89.9, ಸೆಪ್ಟೆಂಬರ್‌ನಲ್ಲಿ 88.51ರಷ್ಟಿದ್ದು, ಮೂರೂ ತಿಂಗಳಲ್ಲಿ ಜಾಗತಿಕವಾಗಿ ಸಮಯಪಾಲನೆ ಮಾಡಿದ ವಿಮಾನ ನಿಲ್ದಾಣ ಎಂಬ ಗೌರವ ದೊರೆತಿದೆ.

By December 5, 90 flights can take off in an hour from Kempegowda  International Airportಮೂರು ತಿಂಗಳಲ್ಲಿ ಜಾಗತಿಕವಾಗಿ ಐದು ವಿಮಾನ ನಿಲ್ದಾಣಗಳು ಉನ್ನತ ಸ್ಥಾನದಲ್ಲಿವೆ, ಸಾಲ್ಟ್‌ಲೇಕ್ ಸಿಟಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಿನ್ನಿಯಾಪೊಲೀಸ್ ಸೆಂಟ್ ಪಾಲ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಎಲ್‌ಡೊರಾಡೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಗ್ರಸ್ಥಾನದಲ್ಲಿದೆ.

How Kempegowda International is harvesting sunlight and rainwater - Runway  GirlRunway Girlಕಳೆದು ಮೂರು ತಿಂಗಳಲ್ಲಿ ಕಟ್ಟುನಿಟ್ಟಾಗಿ ಸಮಯ ಪಾಲನೆ ಮಾಡಿದ ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಒಂದಾಗಿದ್ದು, ದೇಶದ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವೂ ಆಗಿದೆ. 2022-23 ರ ಅವಧಿಯಲ್ಲಿ ಒಟ್ಟಾರೆ 31.91 ಮಿಲಿಯನ್ ಪ್ರಯಾಣಿಕರನ್ನು ಇಲ್ಲಿ ನಿಭಾಯಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!