ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡ ಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಕೆಲವೇ ಕ್ಷಣಗಳಲ್ಲಿ ನೆರವೇರಲಿದೆ. ಈಗಾಗಲೇ ಬೆಂಗಳೂರಿಗೆ ಬಂದಿಳಿದರುವ ಪ್ರಧಾನಿ ಮೋದಿ ಶಾಸಕರ ಭವನದಲ್ಲಿ ಕನಕದಾಸ, ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೂ ಚಾಲನೆ ನೀಡಿದ್ದಾರೆ. ಇದೀಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ತೆರಳಿರುವ ಮೋದಿ ಇನ್ನೇನು ಕೆಲವೇ ಕ್ಷಣಗಳಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್-2 ಹಾಗೂ ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಲಿದ್ದಾರೆ.
ಮೋದಿ ತೆರಳುವ ಮಾರ್ಗಮಧ್ಯೆ ರಸ್ತೆ ಇಕ್ಕೆಲ್ಲಗಳಲ್ಲಿ ಪ್ರಧಾನಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ರಸ್ತೆಯಲ್ಲಿ ಜನರಿಂದ ʻಮೋದಿ ಮೋದಿʼ ಘೋಷಣೆ ಮೊಳಗಿದೆ. ರಸ್ತೆ ಇಕ್ಕೆಲಗಳಲ್ಲಿ ನಿಂತಿರುವ ಜನರತ್ತ ಕೈ ಬೀಸುತ್ತಾ ಮೋದಿ ಏರ್ಪೋರ್ಟ್‌ನತ್ತ ತೆರಳಿದರು. ಮೋದಿ ನೋಡಲು ರಸ್ತೆಗಳಲ್ಲಿ ಜನ ಸಾಲು ಸಾಲಾಗಿ ನಿಂತಿದ್ದಾರೆ.