ಕೇರಳ ಬಾಂಬ್‌ ಸ್ಫೋಟ ಪ್ರಕರಣ: ಆರೋಪಿ ಡೊಮಿನಿಕ್ ಮಾರ್ಟಿನ್‌ 10 ದಿನ ಪೊಲೀಸರ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೇರಳದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಡೊಮಿನಿಕ್ ಮಾರ್ಟಿನ್‌ನನ್ನು ನವೆಂಬರ್‌ 15ರ ವರೆಗೆ ಅಂದರೆ 10 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ.

ಇದಕ್ಕೂ ಮುನ್ನ ಇಂದು ಡೊಮಿನಿಕ್‌ಗೆ ವೈದ್ಯಕೀಯ ತಪಾಸಣೆ ಮಾಡಿಸಿದ ಕೊಚ್ಚಿ ಪೊಲೀಸರು, ಬಳಿಕ ಎರ್ನಾಕುಳಂ ಪ್ರಿನ್ಸಿಪಾಲ್ ಸೆಷನ್ಸ್‌ ಕೋರ್ಟ್‌ಗೆ ಹಾಜರುಪಡಿಸಿದರು.

ಪೊಲೀಸರಿಂದ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ನ್ಯಾಯಾಧೀಶರ ಮುಂದೆ ನುಡಿದ ಡೊಮಿನಿಕ್, ತಾನು ಆರೋಗ್ಯವಾಗಿದ್ದು, ತನಿಖೆಗೆ ಸಹಕರಿಸುವುದಾಗಿ ಹೇಳಿದ್ದಾನೆ.

ನ್ಯಾಯಾಲಯದ ನ್ಯಾಯಾಧೀಶ ಹನಿ ಎಂ ವರ್ಗೀಸ್ ಅವರು 10 ದಿನಗಳ ಕಸ್ಟಡಿ ಅಗತ್ಯವಿದೆಯೇ ಎಂದು ತನಿಖಾ ಅಧಿಕಾರಿ ಡಿಸಿಪಿ ಶಶಿಧರನ್ ಅವರನ್ನು ಕೇಳಿದರು.
ಸ್ಫೋಟದ ಸಾಮಾಗ್ರಿಯ ಮೂಲ, ಹಣಕಾಸು ಹಾಗೂ ತಾಂತ್ರಿಕ ಮೂಲ, ಆತನ ಅಂತರರಾಷ್ಟ್ರೀಯ ಸಂಪರ್ಕಗಳು ಮತ್ತು 10 ಸ್ಥಳಗಳಲ್ಲಿ ಸಾಕ್ಷ್ಯ ಸಂಗ್ರಹಿಸಬೇಕಾಗಿರುವುದರಿಂದ 10 ದಿನಗಳ ಕಾಲ ಕಸ್ಟಡಿಗೆ ಬೇಕು ಎಂದು ಡಿಸಿಪಿ ಶಶಿಧರನ್‌ ಕೋರ್ಟ್‌ಗೆ ತಿಳಿಸಿದರು.

ನ್ಯಾಯಾಲಯವು ಆರೋಪಿಗೆ ಕಾನೂನು ನೆರವು ಅಗತ್ಯವಿದೆಯೇ ಎಂದು ಕೇಳಿದೆ, ಅದನ್ನು ಆರೋಪಿ ನಿರಾಕರಿಸಿದ್ದಾನೆ. ಬಳಿಕ ನ್ಯಾಯಾಲಯವು ನವೆಂಬರ್ 15, 2023ರ ವರೆಗೆ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಅನುಮತಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!