ಹೊಸದಿಗಂತ ವರದಿ ಉಡುಪಿ:
ಅಡಿಕೆ ತೆಗೆಯುವ ವೇಳೆ ಕರೆಂಟ್ ಶಾಕ್ ಹೊಡೆದು ಯುವಕ ಮೃತಪಟ್ಟ ಘಟನೆ ಕಾಪು ತಾಲೂಕಿನ ಕುರ್ಕಾಲು ಗ್ರಾಮದಲ್ಲಿ ನಡೆದಿದೆ.
ಮಹಾರಾಷ್ಟ್ರ ಮೂಲದ ಪವನ್ (20) ಮೃತ ದುರ್ಧೈವಿ.
ಕಬ್ಬಿಣದ ರಾಡ್ ಗೆ ಕತ್ತಿಯನ್ನು ಕಟ್ಟಿ, ಅಡಿಕೆ ಕೊಯ್ಯುವ ವೇಳೆ, ಆಯತಪ್ಪಿ, ಕತ್ತಿಯು ವಿದ್ಯುತ್ ತಂತಿಗೆ ರಾಡ್ ತಗಲಿದ್ದು, ವಿದ್ಯುತ್ ಶಾಕ್ ಹೊಡೆದು ಯುವಕ ಮೃತಪಟ್ಟಿದ್ದಾನೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.