ಕೇರಳ ಸಿಎಂ ಪಿಣರಾಯಿ ವಿಜಯನ್​ ಕಾರ್ಯಕ್ರಮದಲ್ಲಿ ಕಪ್ಪು ಬಣ್ಣದ ಉಡುಪು, ಮಾಸ್ಕ್​, ಕೊಡೆ ಬ್ಯಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಭಾಗವಹಿಸಲಿರುವ ಕಾರ್ಯಕ್ರಮಕ್ಕೆ ಆಗಮಿಸುವವರು ಯಾರೂ ಕಪ್ಪು ಬಣ್ಣದ ಉಡುಪು, ಕಪ್ಪು ಮಾಸ್ಕ್ ಧರಿಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.ಮಾತ್ರಲ್ಲ, ಕಪ್ಪು ಬಣ್ಣದ ಕೊಡೆ ಕೂಡ ತರುವಂತಿಲ್ಲ ಎಂದು ನಿರ್ದೇಶನ ನೀಡಲಾಗಿದೆ.
ಈಗಾಗಲೇ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿರುವ ಸಪ್ನಾ ಸುರೇಶ್​, ಸಿಎಂ ಪಿಣರಾಯಿ ವಿಜಯನ್ ಪುತ್ರಿ ಮತ್ತು ಪತ್ನಿ ಸೇರಿ ಕುಟುಂಬಸ್ಥರ ಪಾತ್ರವಿದೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಕೇರಳದ ಕೊಝಿಕೋಡ್​ನ ಕೆಥೊಲಿಕ್ ಚರ್ಚ್​​ನಲ್ಲಿನ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಆಗಮಿಸುವವರಿಗೆ ಚರ್ಚ್​ನಿಂದ ಈ ಸೂಚನೆ ನೀಡಲಾಗಿದೆ.
ಸಪ್ನಾ ಸುರೇಶ್ ಪ್ರಕರಣದಲ್ಲಿ ಸಿಎಂ ವಿಜಯನ್ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ ಈ ಕ್ರಮಕೈಗೊಂಡಿದೆ ಎನ್ನಲಾಗಿದೆ. ಅದಕ್ಕೆ ಅನುಸಾರವಾಗಿ ಚರ್ಚ್​ನ ವಾಟ್ಸ್​ಆಯಪ್​ ಗ್ರೂಪ್​ಗಳಲ್ಲಿ ಈ ಸೂಚನೆ ಹರಿದಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!