ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಪುತ್ರಿ ಮೇಲಿನ 135 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಎಫ್ಐಒ ತನಿಖೆ ಪ್ರಶ್ನಿಸಿ ವೀಣಾ ವಿಜಯನ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಪಿಣರಾಯಿ ವಿಜಯನ್ ಪುತ್ರಿ ಟಿ.ವೀಣಾ ಎಕ್ಸಲಾಜಿಕ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕಿಯಾಗಿದ್ದಾರೆ. ಈ ವೀಣಾ ಕಂಪೆನಿ ಮತ್ತು ಕೊಚ್ಚಿನ್ ಮಿನರಲ್ಸ್- ರುಟೈಲ್ ಲಿಮಿಟೆಡ್ ನಡುವಿನ ಆರ್ಥಿಕ ವಹಿವಾಟುಗಳ ಕುರಿತ ವಿವಾದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ ಅಧೀನದ ಗಂಭೀರ ವಂಚನೆಗಳ ತನಿಖಾ ಕಚೇರಿಗೆ (ಎಸ್‌ಎಫ್‌ಐಒ) ಪ್ರಕರಣವನ್ನು ಒಪ್ಪಿಸಲಾಗಿದೆ. ಎಸ್‌ಎಫ್‌ಐಒ ತನಿಖೆ ಪ್ರಶ್ನಿಸಿ ವೀಣಾ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು ಇದೀಗ ವಜಾಗೊಂಡಿದೆ. ಈಗಾಗಲೇ ವೀಣಾ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬಾರದು ಹೈಕೋರ್ಟ್ ಎಸ್‌ಎಫ್‌ಐಒ ಸೂಚನೆ ನೀಡಿತ್ತು.