ಮಹಿಳೆ ಸ್ನಾನದ ದೃಶ್ಯ ಸೆರೆ ಹಿಡಿಯುತ್ತಿದ್ದ ಕೇರಳ ಸಿಪಿಐ ನಾಯಕನ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಮಹಿಳೆಯೊಬ್ಬರು ಸ್ನಾನ ಮಾಡುತ್ತಿದ್ದ ವೇಳೆ ಮೊಬೈಲ್ ಫೋನ್ ನಿಂದ ಸ್ನಾನಗೃಹದ ದೃಶ್ಯಗಳನ್ನು ಚಿತ್ರೀಕರಿಸಿದ ಆರೋಪದಡಿ ಸಿಪಿಎಂನ ಮಾಜಿ ಶಾಖೆಯ ಕಾರ್ಯದರ್ಶಿಯೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಕೊಡುಂಬು ಅಂಬಲಪರಂಬದ ಸಿಪಿಎಂ ಮಾಜಿ ಶಾಖೆಯ ಕಾರ್ಯದರ್ಶಿ ಶಾಜಹಾನ್ ಬಂಧಿತ ಆರೋಪಿ.  ಪೊಲೀಸರು ಆತನನ್ನು ತಮಿಳುನಾಡಿನಲ್ಲಿ ವಶಕ್ಕೆ ಪಡೆದಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡ ನಂತರ ಶಾಜಹಾನ್ ಪರಾರಿಯಾಗಿದ್ದ.
ತನ್ನ ಮುಖವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ, ಆತ ಆರೋಪಿಯೆಂದು ಹೆಸರಿಸಿದ ಬಳಿಕ ಸಿಪಿಎಂ ಆತನನ್ನು ಪದಚ್ಯುತಗೊಳಿಸಿತ್ತು. ಬಾತ್ ರೂಂ ದೃಶ್ಯಗಳನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಲು ಯತ್ನಿಸಿದ್ದಾನೆ ಎಂದು ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪಾಲಕ್ಕಾಡ್ ದಕ್ಷಿಣ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮಹಿಳೆಯ ಮನೆಯವರು ಅವರ ಮನೆಯ ಆವರಣದಲ್ಲಿ ಆರೋಪಿ ಕೃತ್ಯಕ್ಕೆ ಬಳಿಸಿದ್ದ ಫೋನ್ ಅನ್ನು ವಶಪಡಿಸಿಕೊಂದ್ದರು. ಸಾಕ್ಷ್ಯವಾಗಿ ದೂರವಾಣಿ ಸಮೇತ ದೂರು ಸಲ್ಲಿಸಲಾಗಿದೆ.
ಜೂನ್ 11 ರಂದು ಪ್ರಕರಣ ನಡೆದಿದೆ. ಬಾತ್ರೂಮ್ ವೆಂಟಿಲೇಟರ್ ಮೂಲಕ ಕೈಯೊಂದು ಹೊರಚಾಚಿರುವುದನ್ನು ನೋಡಿದ ಮಹಿಳೆ ಕಿರುಚಿಕೊಂಡಾಗ ಆ ವ್ಯಕ್ತಿ ಓಡಿಹೋದನು. ಬಳಿಕ ಆಕೆಯ ಮನೆಯ ಆವರಣದಲ್ಲಿ ಆತನಿಂದ ಅಶ್ಲೀಲ ದೃಶ್ಯ ಸೆರೆಹಿಡಿದಿದ್ದ ಮೊಬೈಲ್ ಫೋನ್‌ ವಶಪಡಿಸಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!