ಒಟ್ಟಿಗೆ ಸಾಯಲು ನಿರ್ಧಾರ ಮಾಡಿದ್ದ ಜೋಡಿ: ಭಯದಿಂದ ಹಿಂದೆ ಸರಿದ ಮಹಿಳೆ, ಪ್ರಿಯಕರ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಆದ್ಯಾವುದೋ ಕಾರಣದಿಂದ ಆತ್ಮಹತ್ಯೆಗೆ ನಿರ್ಧರಿಸಿದ್ದರು.  ಈ ಒಪ್ಪಂದದ ಭಾಗವಾಗಿ, ಸಾಯಲೆಂದು ಸಿದ್ಧತೆ ಮಾಡಿಕೊಂಡು ಹೋಟೆಲ್‌ ಗೆ ಬಂದಿದ್ದರು. ಸಾಯುವ ಮುನ್ನ ಅವರು ಕೆಲವು ಔಷಧಿಗಳನ್ನು ಸೇವಿಸಿದ್ದಾರೆ. ಆ ಬಳಿಕ ಮೊದಲು ಪ್ರಿಯಕರ ನೇಣು ಬಿಗಿದುಕೊಂಡಿದ್ದಾನೆ. ಪ್ರಿಯಕರನ ಸಾವಿನ ಕೊನೆಯ ಕ್ಷಣಗಳನ್ನು ನೋಡಿ ಡಿಚ್ಮೂಡಳಾಗಿ ಧೈರ್ಯ ಕಳೆದುಕೊಂಡ 31 ವರ್ಷದ ಮಹಿಳೆ ಕೊನೆ ಕ್ಷಣದಲ್ಲಿ ಸಾವಿನ ನಿರ್ಧಾರದಿಂದ ಹಿಂದೆ ಸರಿದಿದ್ದು, ಪ್ರಿಯಕರ ಸಾವನ್ನಪ್ಪಿದ ಘಟನೆ ಕೇರಳದ ಪಥನಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ.
ಸೋಮವಾರ ರಾತ್ರಿ ಮಹಿಳೆಯ ಕಿರುಚಾಟ ಕೇಳಿ ಜೋಡಿಯಿದ್ದ ಕೋಣೆಯತ್ತ ಧಾವಿಸಿದ ಸಿಬ್ಬಂದಿಗೆ ವ್ಯಕ್ತಿ ನೇಣು ಬಿಗಿದುಕೊಂಡಿದ್ದು, ಮಹಿಳೆಯ ಕಿವಿಯಿಂದ ರಕ್ತ ಸೋರುತ್ತಿರುವುದನ್ನು ಕಂಡುಬಂದಿದೆ. ಕೂಡಲೇ ಪೊಲೀಸರು ಆಗಮಿಸಿ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಆಕೆಯನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯ ಪ್ರಕಾರ, ಇಬ್ಬರೂ ಒಟ್ಟಿಗೆ ಸಾಯಲು ನಿರ್ಧರಿಸಿದ್ದರು, ಆದರೆ ಪ್ರಿಯಕರನ ಸಾವು ನೋಡಿ ಮಹಿಳೆ ಭಯಗೊಂಡು ಕಿರುಚಲು ಪ್ರಾರಂಭಿಸಿದ್ದಾಳೆ.
ತಿರುವನಂತ ಪುರ ಮೂಲದ ಮಹಿಳೆ ಮನೆಯಲ್ಲಿ ಕಾಣದಾದಾಗ, ಅವರ ಸಂಬಂಧಿಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದ್ದರು. ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!