ಕಣ್ಣೂರು ವಿವಿ ಗೆ ಕೇರಳ ಸಿಎಂ ಆಪ್ತ ಕಾರ್ಯದರ್ಶಿಯ ಹೆಂಡತಿಯ ನೇಮಕವನ್ನು ತಡೆಹಿಡಿದ ಕೇರಳ ರಾಜ್ಯಪಾಲರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೇರಳ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಅವರು ವಿಶ್ವವಿದ್ಯಾನಿಲಯಗಳ ಕುಲಪತಿಯಾಗಿ ಅಧಿಕಾರ ಚಲಾಯಿಸಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವೈಯುಕ್ತಿಕ ಕಾರ್ಯದರ್ಶಿ ಕೆ ಕೆ ರಾಜೇಶ್ ಅವರ ಪತ್ನಿ ಪ್ರಿಯಾ ವರ್ಗೀಸ್ ಅವರನ್ನು ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರಾಗಿ ನೇಮಕ ಮಾಡುವುದನ್ನು ತಡೆಹಿಡಿದಿದ್ದಾರೆ.

ಪ್ರಿಯಾ ವರ್ಗೀಸ್ ಅವರು ವಿಶ್ವವಿದ್ಯಾಲಯದಲ್ಲಿ ಮಲಯಾಳಂ ವಿಭಾಗಕ್ಕೆ ಸೇರಲಿದ್ದಾರೆ. ಆಕೆ ಮಾಜಿ ಸಂಸದೆಯೂ ಹೌದು.

ಗೌರವಾನ್ವಿತ ಗವರ್ನರ್ ಶ್ರೀ ಆರಿಫ್ ಮೊಹಮ್ಮದ್ ಖಾನ್ ಅವರು ಕುಲಪತಿಯಾಗಿ ಕಣ್ಣೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ನ ನಿರ್ಣಯ (ಸಂಖ್ಯೆ 2022.313 ದಿನಾಂಕ 27.06.2022) ಅನುಸಾರ ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಮಲಯಾಳಂ ವಿಭಾಗದಲ್ಲಿ ಸಹ ಪ್ರಾಧ್ಯಾಪಕರ ನೇಮಕಾತಿಯ ಆಯ್ಕೆ ವಿಧಾನದ ಎಲ್ಲಾ ಮುಂದಿನ ಪ್ರಕ್ರಿಯೆಗಳಿಗೆ ತಡೆ ನೀಡಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆ ಮಲಯಾಳಂ ವಿಭಾಗದ ಸಹ ಪ್ರಾಧ್ಯಾಪಕಿಯಾಗಿ ಡಾ.ಪ್ರಿಯಾ ವರ್ಗೀಸ್ ನೇಮಕಕ್ಕೆ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ವಿಸಿ ಅವಧಿ ವಿಸ್ತರಣೆಯಾಗುವ ಮುನ್ನ ನವೆಂಬರ್‌ನಲ್ಲಿ ನಡೆದ ಸಂದರ್ಶನದಲ್ಲಿ ಪ್ರಿಯಾ ಅವರಿಗೆ ಪ್ರಥಮ ರ್ಯಾಂಕ್ ಪಡೆದಿರುವುದರ ಕುರಿತು ವಿವಾದ ಎದ್ದಿತ್ತು. ವಿವಾದದ ಹಿನ್ನೆಲೆಯಲ್ಲಿ ನೇಮಕಾತಿಯನ್ನು ತಡೆಹಿಡಿಯಲಾಗಿದ್ದರೂ, ಕಣ್ಣೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಕಳೆದ ತಿಂಗಳು ನೇಮಕಾತಿಗೆ ಅನುಮೋದನೆ ನೀಡಿತ್ತು.

ಸಿಪಿಎಂ ನಾಯಕ ಕೆ.ಕೆ.ರಾಗೇಶ್ ಅವರ ಪತ್ನಿಯನ್ನು ನಿಯಮಗಳನ್ನು ಅನುಸರಿಸದೆ ಸಹ ಪ್ರಾಧ್ಯಾಪಕರನ್ನಾಗಿ ನೇಮಿಸಿದ ಕುರಿತು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಈ ಹಿಂದೆ ವಿಶ್ವವಿದ್ಯಾಲಯಗಳ ಕುಲಪತಿಯಾಗಿರುವವರೆಗೆ ಯಾವುದೇ ಒಲವು ಮತ್ತು ಸ್ವಜನಪಕ್ಷಪಾತಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!