ಮೀಡಿಯಾ ಒನ್ ಚಾನೆಲ್‌ಗೆ ನಿರ್ಬಂಧ: ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆದೇಶ ಎತ್ತಿಹಿಡಿದ ಕೇರಳ ಹೈಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್

ತಿರುವನಂತರಪುರ: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಮೀಡಿಯಾ ಒನ್ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನ ಚಾನೆಲ್‌ಗೆ ಅಪ್‌ಲಿಂಕ್ ಮತ್ತು ಡೌನ್‌ಲಿಂಕ್ ಅನುಮತಿ ರದ್ದುಗೊಳಿಸಿರುವುದನ್ನು ಕೇರಳ ಹೈಕೋರ್ಟ್ ಇಂದು ಎತ್ತಿಹಿಡಿದಿದೆ. ಗೃಹ ಸಚಿವಾಲಯವು ಚಾನೆಲ್‌ಗೆ ಭದ್ರತಾ ಅನುಮತಿಯನ್ನು ನಿರಾಕರಿಸಿದ ನಂತರ ಚಾನೆಲ್‌ಗೆ ನಿರ್ಬಂಧ ವಿಧಿಸಲಾಗಿದೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆದೇಶದ ವಿರುದ್ಧದ ರಿಟ್ ಅರ್ಜಿಯನ್ನು ವಜಾಗೊಳಿಸಿದ ಕೇರಳ ಉಚ್ಚ ನ್ಯಾಯಾಲಯವು, ಚಾನೆಲ್‌ಗೆ ಗೃಹ ಸಚಿವಾಲಯದ ಭದ್ರತಾ ಅನುಮತಿ ನಿರಾಕರಣೆಯು ಗುಪ್ತಚರ ಮಾಹಿತಿಗಳನ್ನು ಆಧರಿಸಿದೆ ಎಂದು ತಿಳಿಸಿದೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಜ. 31ರಂದು ಮೀಡಿಯಾ ಒನ್ ಚಾನೆಲ್ ಅನ್ನು ನಿರ್ವಹಿಸುವ ಮಾಧ್ಯಮಮ್ ಬ್ರಾಡ್‌ಕಾಸ್ಟಿಂಗ್ ಲಿಮಿಟೆಡ್‌ಗೆ ನೀಡಲಾದ ಅಪ್‌ಲಿಂಕ್ ಮತ್ತು ಡೌನ್‌ಲಿಂಕ್ ಅನುಮತಿಯನ್ನು ಹಿಂತೆಗೆದುಕೊಳ್ಳುವ ಆದೇಶ ಹೊರಡಿಸಿದೆ. ಈ ಆದೇಶವು ಅನುಮತಿ ನೀಡಲಾದ ಚಾನಲ್‌ಗಳ ಪಟ್ಟಿಯಿಂದ ಮೀಡಿಯಾ ಒನ್ ಚಾನಲ್‌ನ ಹೆಸರನ್ನು ತೆಗೆದುಹಾಕಿದೆ.

ಸಚಿವಾಲಯದಿಂದ 2011 ಸೆಪ್ಟೆಂಬರ್ 30ರಿಂದ 2021 ಸೆಪ್ಟೆಂಬರ್ 29ರವರೆಗೆ ಅಪ್‌ಲಿಂಕ್ ಮಾಡಲು ಮತ್ತು ಡೌನ್‌ಲಿಂಕ್ ಮಾಡಲು ಚಾನೆಲ್‌ಗೆ ಈ ಹಿಂದೆ ಅನುಮತಿ ನೀಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!