ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳವು ಪಂಜಾಬನ್ನು ಹಿಂದಿಕ್ಕಿ ʼಡ್ರಗ್ಸ್ ರಾಜಧಾನಿʼ ಯಾಗುವತ್ತ ಸಾಗುತ್ತಿದೆ ಎಂದು ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯದ ಆದಾಯದ ಎರಡು ಮುಖ್ಯ ಮೂಲಗಳು ಲಾಟರಿ ಮತ್ತು ಮದ್ಯ ಎಂಬುದು ನಾಚಿಕೆಯಾಗುವ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ವಿಶ್ವವಿದ್ಯಾನಿಲಯಗಳಿಗೆ ನೇಮಕಾತಿ ಸೇರಿದಂತೆ ವಿವಿಧ ವಿಷಯಗಳಲ್ಲಿ ಎಡಪಂಥೀಯ ಕಮ್ಯುನಿಸ್ಟ್ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಖಾನ್, ಎಲ್ಲರೂ ಮದ್ಯ ಸೇವನೆಯ ವಿರುದ್ಧ ಪ್ರಚಾರ ಮಾಡುತ್ತಿದ್ದರೆ, ಕೇರಳವು ಅದರ ಬಳಕೆಯನ್ನು ಪ್ರೋತ್ಸಾಹಿಸುತ್ತಿದೆ ಹೇಳಿದ್ದಾರೆ.
“ಇಲ್ಲಿ ನಮ್ಮ ಅಭಿವೃದ್ಧಿಗೆ ಲಾಟರಿ ಮತ್ತು ಮದ್ಯವೇ ಸಾಕು ಎಂದು ನಿರ್ಧರಿಸಿದ್ದೇವೆ. ಶೇ. 100ರಷ್ಟು ಸಾಕ್ಷರತೆ ಹೊಂದಿರುವ ರಾಜ್ಯಕ್ಕೆ ಎಂತಹ ನಾಚಿಕೆಗೇಡಿನ ಪರಿಸ್ಥಿತಿ ಬಂದಿದೆ. ರಾಜ್ಯದ ಮುಖ್ಯಸ್ಥನಾಗಿ ನಾನು ನಾಚಿಕೆಪಡುತ್ತೇನೆ, ನನ್ನ ಆದಾಯದ ಎರಡು ಮುಖ್ಯ ಮೂಲಗಳು. ರಾಜ್ಯ ಲಾಟರಿ ಮತ್ತು ಮದ್ಯ, ಲಾಟರಿ ಎಂದರೇನು? ಇಲ್ಲಿ ಕುಳಿತಿರುವ ನಿಮ್ಮಲ್ಲಿ ಯಾರಾದರೂ ಲಾಟರಿ ಟಿಕೆಟ್ ಖರೀದಿಸಿದ್ದೀರಾ, ಬಡವರು ಮಾತ್ರ ಲಾಟರಿ ಟಿಕೆಟ್‌ಗಳನ್ನು ಖರೀದಿಸಿದ್ದಾರೆ, ನೀವು ಅವರನ್ನು ದರೋಡೆ ಮಾಡುತ್ತಿದ್ದೀರಿ, ನೀವು ನಿಮ್ಮ ಜನರನ್ನು ಮದ್ಯದ ಚಟಕ್ಕೆ ಒಳಪಡಿಸುತ್ತಿದ್ದೀರಿ” ಎಂದು ಖಾನ್ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಕೊಚ್ಚಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಖಾನ್, ಕೇರಳವು ಮದ್ಯ ಮಾರಾಟವನ್ನು ಉತ್ತೇಜಿಸುವ ಕಾರಣ ಪಂಜಾಬ್ ಅನ್ನು ಹಿಂದಿಕ್ಕಿ ಡ್ರಗ್ಸ್ ರಾಜಧಾನಿಯಾಗುತ್ತಿದೆ ಎಂದು ಹೇಳಿದ್ದಾರೆ.