ಕೇಂದ್ರದಿಂದ ಕೇರಳಕ್ಕೆ ತಾರತಮ್ಯ ಆಗಿಲ್ಲ: ಅಭಿವೃದ್ಧಿ ಚಟುವಟಿಕೆ ಲಿಸ್ಟ್ ನೀಡಿದ ನಿರ್ಮಲಾ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ಕೇರಳದ ಜನತೆಗೆ ಯಾವುದೇ ತಾರತಮ್ಯ ಮಾಡಿಲ್ಲ. ಎಲ್ಲಾ ಹಂಚಿಕೆಗಳನ್ನು ಉಳಿದ ರಾಜ್ಯಗಳಂತೆಯೇ ಸರಿಯಾಗಿ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅನ್ನ ಯೋಜನೆಯಲ್ಲಿ ವಿತರಿಸುವ ಆಹಾರ ಪದಾರ್ಥಗಳಿಗಾಗಿ ಯಾವುದೇ ರಾಜ್ಯ ಸರ್ಕಾರ ಒಂದು ಪೈಸೆಯಷ್ಟು ಕೂಡಾ ಖರ್ಚು ಮಾಡಬೇಕಾಗಿಲ್ಲ. ಪ್ರಧಾನಿ ಮೋದಿ ಕೇರಳದ ಜನತೆಗೆ ಎಂದಿಗೂ ತಾರತಮ್ಯ ಮಾಡುವುದಿಲ್ಲ. ರಾಜ್ಯಕ್ಕೆ ನೀಡಬೇಕಾದ ಪಾಲನ್ನು ಕೂಡಾ ಮುಂಗಡವಾಗಿ ಪಾವತಿಸಲಾಗಿದೆ ಎಂದು ಕೇಂದ್ರ ಸಚಿವೆ ಹೇಳಿದರು.
ಇದೇ ಸಂದರ್ಭ ತಿರುವನಂತಪುರದಲ್ಲಿ ಮಂಜೂರಾದ ಅಭಿವೃದ್ಧಿ ಚಟುವಟಿಕೆಗಳನ್ನು ನಿರ್ಮಲಾ ಸೀತಾರಾಮನ್ ಇದೇ ಸಂದರ್ಭ ಪಟ್ಟಿ ಮಾಡಿದರು.
ಜಲಜೀವನ ಮಿಷನ್‌ಗಾಗಿ 2.25 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ 5,408 ಮನೆಗಳ ನಿರ್ಮಾಣ, ಪಿ.ಎಂ. ಆವಾಸ್ ಗ್ರಾಮೀಣ ಮತ್ತು ನಗರ ಯೋಜನೆಗಳ ಮೂಲಕ 24,000 ಮನೆ ನಿರ್ಮಾಣ, ಸ್ವಚ್ಛತಾ ಮಿಷನ್ ಮೂಲಕ 20,000 ಶೌಚಾಲಯಗಳನ್ನು ನಿರ್ಮಾಣ ನಡೆದಿದೆ. ಇನ್ನು ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಎಂಟು ಲಕ್ಷ ಜನರನ್ನು ಸೇರಿಸಲಾಗಿದೆ. ಜನೌಷಧಿ ಮೂಲಕ 76 ಕೇಂದ್ರಗಳ ನಿರ್ಮಾಣ, ಉಜ್ವಲ ಯೋಜನೆಯಡಿ ಮಂಜೂರಾದ 63,500 ಸಂಪರ್ಕಗಳು, ಅನ್ನ ಯೋಜನೆಯಡಿ 16 ಲಕ್ಷ ಫಲಾನುಭವಿಗಳಿಗೆ ಉಚಿತ ಪಡಿತರ ವಿತರಣೆ, ಜನಧನ್ ಯೋಜನೆಯ ಮೂಲಕ 8.5 ಲಕ್ಷ ಬ್ಯಾಂಕ್ ಖಾತೆಗಳನ್ನು ಜನರು ತೆರೆದಿದ್ದಾರೆ ಎಂದು ಕೇಂದ್ರ ಸಚಿವೆ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!