Sunday, August 14, 2022

Latest Posts

SHOCKING | ನೆರೆಮನೆಯ ನಾಯಿಯ ರೌದ್ರಾವತಾರಕ್ಕೆ ಕಾಲೇಜು ವಿದ್ಯಾರ್ಥಿನಿ ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನೆರೆಮನೆಯವರ ಸಾಕುನಾಯಿ ಕಚ್ಚಿ ರೇಬೀಸ್ ಸೋಂಕಿನಿಂದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ದಾರುಣ ಘಟನೆ ಕೇರಳದಲ್ಲಿ ನಡೆದಿದೆ.
ಪಲಕ್ಕಾಡ್‌ ನ  ಮಂಗರ ಮೂಲದ ಸುಗುನನ್ ಮತ್ತು ಸಿಂಧು ದಂಪತಿಯ ಪುತ್ರಿಯಾದ  ಶ್ರೀಲಕ್ಷ್ಮಿ (19) ಮೃತಪಟ್ಟ ದುರ್ದೈವಿ.
ಕೊಯಮತ್ತೂರಿನಲ್ಲಿ ಮೊದಲ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಶ್ರೀಲಕ್ಷಮಿ ಮೇ 30 ರಂದು ಕಾಲೇಜಿಗೆ ಹೋಗುತ್ತಿದ್ದಾಗ  ನೆರೆಮನೆಯವರ ನಾಯಿ ಕಚ್ಚಿತ್ತು .ಆ ನಂತರ ಯುವತಿ ಆರೋಗ್ಯ ಇಲಾಖೆ ಸೂಚನೆಯಂತೆ ಲಸಿಕೆಯನ್ನೂ ಹಾಕಿಸಿಕೊಂಡರು. ಅದಾದ ಕೆಲವು ದಿನಗಳಿಂದ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ.
ಇತ್ತೀಚೆಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶ್ರೀಲಕ್ಷ್ಮೀ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ರೇಬಿಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು. ನಂತರ, ಆಕೆಯ ಸ್ಥಿತಿ ಹದಗೆಟ್ಟ ನಂತರ ತ್ರಿಶೂರ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿಚಿಕಿತ್ಸೆ ಫಲಕಾರಿಯಾಗದೆ ಯುವತು ಮೃತಪಟ್ಟಿದ್ದಾಳೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss