Sunday, December 10, 2023

Latest Posts

ಕೇರಳ ಸರಣಿ ಸ್ಫೋಟ: ಅತ್ಯಂತ ದುರದೃಷ್ಟಕರ ಘಟನೆ ಎಂದ ಪಿಣರಾಯಿ ವಿಜಯನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದು ಬೆಳಗ್ಗೆ ಕ್ರಿಶ್ಚಿಯನ್ನರ ಪ್ರಾರ್ಥನಾ ಸಭೆಯಲ್ಲಿ ನಡೆದ ಸರಣಿ ಸ್ಫೋಟಕ್ಕೆ ಕೇರಳ ಜನತೆ ಬೆಚ್ಚಿಬಿದ್ದಿದ್ದಾರೆ. ಅಲ್ಲಿವರೆಗೂ ದೇವರ ನಾಮಸ್ಮರಣೆಯಿಂದ ಕೂಡಿದ್ದ ಪ್ರದೇಶ ಇದ್ದಕ್ಕಿದ್ದಂತೆ ಜನರ ಕೂಗಾಟ, ಕಿರುಚಾಟಗಳಿಂದ ತುಂಬಿ ಹೋಯ್ತು. ಪ್ರದೇಶವೆಲ್ಲಾ ಅಸ್ತವ್ಯಸ್ತವಾಗಿ ರಕ್ತ-ಸಿಕ್ತದಿಂದ ಕೂಡಿತ್ತು.

ದುರಂತ ಘಟನೆ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಈ ಘಟನೆಯನ್ನು ಅತ್ಯಂತ ʻದುರದೃಷ್ಟಕರʼ ಎಂದು ಬಣ್ಣಿಸಿದರು. ಘಟನೆಗೆ ಸಂಬಂಧಿಸಿದಂತೆ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ. ಎಲ್ಲ ಉನ್ನತ ಅಧಿಕಾರಿಗಳು ಎರ್ನಾಕುಲಂನಲ್ಲಿದ್ದಾರೆ. ಡಿಜಿಪಿ ಕೂಡ ಸ್ಥಳದಲ್ಲಿದ್ದಾರೆ. ನಾವು ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದು, ಡಿಜಿಪಿ ಜತೆ ಮಾತನಾಡಿದ್ದೇನೆ. ತನಿಖೆಯ ನಂತರ ಹೆಚ್ಚಿನ ವಿವರ ಸಿಗಬೇಕಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!