ಕೇರಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: 99.70% ವಿದ್ಯಾರ್ಥಿಗಳು ಪಾಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೇರಳ ಎಸ್‌ಎಸ್‌ಎಲ್‌ಸಿ (Kerala SSLC Result) ಫಲಿತಾಂಶ ಘೋಷಣೆಯಾಗಿದ್ದು, ಶೇಕಡಾ 99.70 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಫಲಿತಾಂಶವನ್ನು ರಾಜ್ಯ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ (V Sivankutty) ಇಂದು ಘೋಷಿಸಿದರು. ಒಟ್ಟಾರೆ, ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ ಎಸ್‌ಎಸ್‌ಎಲ್‌ಸಿ (SSLC) ವಿದ್ಯಾರ್ಥಿಗಳ ಸಂಖ್ಯೆ 68,604. ಮಲಪ್ಪುರಂನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಅಂದರೆ 4856 ವಿದ್ಯಾರ್ಥಿಗಳು ಎ ಪ್ಲಸ್ ಗಳಿಸಿದ್ದಾರೆ. ಒಟ್ಟು 2581 ಶಾಲೆಗಳು ಈ ವರ್ಷ ಶೇ.100 ಫಲಿತಾಂಶ ಪಡೆದಿವೆ. 4,19,362 ರೆಗ್ಯುಲರ್ ವಿದ್ಯಾರ್ಥಿಗಳು ಮತ್ತು 192 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ ಬಾಲಕ ಮತ್ತು ಬಾಲಕಿಯರ ಸಂಖ್ಯೆ ಕ್ರಮವಾಗಿ 2,13,801 ಮತ್ತು 2,00,561 ಆಗಿದೆ.

ಕೇರಳ, ಗಲ್ಫ್ ಮತ್ತು ಲಕ್ಷದ್ವೀಪಗಳಲ್ಲಿ 4,19,128 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಗಲ್ಫ್ ಪ್ರದೇಶದಲ್ಲಿ ಪರೀಕ್ಷೆಗೆ ಹಾಜರಾದ 518 ವಿದ್ಯಾರ್ಥಿಗಳ ಪೈಕಿ 504 ಮಂದಿ ಪಾಸಾಗಿದ್ದಾರೆ (ಉತ್ತೀರ್ಣ ಪ್ರಮಾಣ ಶೇ. 97.3). ಗಲ್ಫ್ ನಲ್ಲಿರುವ ನಾಲ್ಕು ಕೇಂದ್ರಗಳು ಶೇ.100ರಷ್ಟು ಯಶಸ್ಸು ಸಾಧಿಸಿವೆ. ಲಕ್ಷದ್ವೀಪದಲ್ಲಿ ಪರೀಕ್ಷೆಗೆ ಹಾಜರಾದ 289 ವಿದ್ಯಾರ್ಥಿಗಳ ಪೈಕಿ 283 ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದಿದ್ದಾರೆ. ಉತ್ತೀರ್ಣ – ಶೇಕಡಾ 97.92. ನಾಲ್ಕು ಕೇಂದ್ರಗಳಲ್ಲಿ ಶೇ.100ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಟಿಎಚ್‌ಎಸ್‌ಎಲ್‌ಸಿಯಲ್ಲಿ 2914 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 2913 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇಕಡಾ 99 ಮಂದಿ ಇಲ್ಲಿ ಉತ್ತೀರ್ಣರಾಗಿದ್ದಾರೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಒಂದು ವರ್ಷ ಉಳಿಸಿ (SAY) ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದು ಜೂನ್ 7 ರಿಂದ 14 ರವರೆಗೆ ನಡೆಯಲಿದೆ. SAY ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿ ಗರಿಷ್ಠ ಮೂರು ವಿಷಯಗಳಿಗೆ ಹಾಜರಾಗಬಹುದು.ಜೂನ್ ಕೊನೆಯ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!