ಕೇರಳದಲ್ಲಿ ಸಂಪೂರ್ಣ ಇ-ಆಡಳಿತ ಜಾರಿ: ಸರ್ಕಾರಿ ಸೇವೆಗಳು ಡಿಜಿಟಲ್‌ನಲ್ಲಿ ಲಭ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅತಿ ಹೆಚ್ಚು ಸಾಕ್ಷರರನ್ನು ಹೊಂದಿರುವ ರಾಜ್ಯ ಎಂದು ಹೆಸರುವಾಸಿಯಾಗಿರುವ ಕೇರಳದಲ್ಲಿ ಇನ್ನು ಮುಂದೆ ‘ಸಂಪೂರ್ಣ ಇ- ಆಡಳಿತ’ ಜಾರಿಯಾಗಲಿದೆ. ಇ- ಆಡಳಿತ ಜಾರಿ ಮಾಡಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಕೇರಳ.

800ಕ್ಕೂ ಹೆಚ್ಚು ಸರ್ಕಾರಿ ಸೇವೆಗಳನ್ನು ಆನ್‌ಲೈನ್‌ನಲ್ಲಿ ನೀಡುವ ಇ-ಸೇವನಂ ಎಂಬ ಏಕಗವಾಕ್ಷಿ ಕಾರ್ಯವಿಧಾನವನ್ನು ಸರ್ಕಾರ ರೂಪಿಸಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೇದಿಕೆಗಳನ್ನು ಬಳಸಿಕೊಂಡು ಸರ್ಕಾರದ ಎಲ್ಲ ಸೇವೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ದೇಶದಲ್ಲಿಯೇ ಕೇರಳವು ಮೊದಲ ಸಂಪೂರ್ಣ ಸಾಕ್ಷರತಾ ರಾಜ್ಯವಾಗಿದೆ. ಹೀಗಾಗಿ ಅಲ್ಲಿನ ರಾಜ್ಯ ಸರ್ಕಾರ ಇದನ್ನು ಬಳಸಿಕೊಳ್ಳಲು ಆಡಳಿತ ಡಿಜಿಲೀಕರಣಕ್ಕೆ ಯತ್ನ ಮಾಡಿದೆ.

ಜನರಿಗೆ ಸರ್ಕಾರಿ ಸೇವೆಗಳ ವಿತರಣೆಯಲ್ಲಿ ಪಾರದರ್ಶಕತೆ ಮತ್ತು ಅವರೆಲ್ಲರ ಭಾಗವಹಿಸುವಿಕೆಯನ್ನು ಇದು ಹೊಂದಿದೆ. ಡಿಜಿಟಲೀಕರಣಗೊಳಿಸುವುದರ ಜೊತೆಗೆ, ಸಂಪೂರ್ಣ ಇ-ಆಡಳಿತವು ಸೌಲಭ್ಯ ವಂಚಿತರು, ಸಮಾಜದ ಕಟ್ಟಕಡೆಯ ವ್ಯಕ್ತಿ, ಎಲ್ಲ ವರ್ಗಗಳಿಗೂ ನೆರವು ಸಿಗುವುದನ್ನು ಇದು ಖಚಿತಪಡಿಸುತ್ತದೆ ಎಂದು ಹೇಳಲಾಗಿದೆ.

ಆರೋಗ್ಯ, ಶಿಕ್ಷಣ, ಭೂ ಕಂದಾಯ, ಆಸ್ತಿಗಳ ದಾಖಲಾತಿ, ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಸಾಮಾಜಿಕ ಭದ್ರತಾ ಪಾವತಿಗಳು ಸೇರಿದಂತೆ ಎಲ್ಲ ಪ್ರಮುಖ ಸೇವೆಗಳನ್ನು ಈಗಾಗಲೇ ಡಿಜಿಟಲೀಕರಣಗೊಳಿಸಲಾಗಿದೆ. ಡಿಜಿಟಲೀಕರಣ ಕ್ರಮದ ಅನುಷ್ಠಾನವನ್ನು ನೋಡಲ್ ಏಜೆನ್ಸಿಯಾದ ‘ಕೇರಳ ಐಟಿ ಮಿಷನ್’ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!