ಹೊಸದಿಗಂತ, ಡಿಜಿಟಲ್ ಡೆಸ್ಕ್:
ಬುಧವಾರಕ್ಕೆ ಅಂತ್ಯಗೊಂಡ ಹಿಂದಿನ 24 ತಾಸುಗಳಲ್ಲಿ ಕೇರಳ ರಾಜ್ಯ ಬರೋಬ್ಬರಿ 89,1823 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆ ಮಾಡಿದೆ!
ಹೆಚ್ಚುತ್ತಿರುವ ಬಿಸಿಲು ಹಾಗೂ ಆರಂಭವಾಗಿರುವ ಪರೀಕ್ಷಾ ಸಮಯ ವಿದ್ಯುತ್ ಬಳಕೆ ಹೆಚ್ಚಳವಾಗಲು ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ. ಅಂಕಿಅಂಶಗಳ ಪ್ರಕಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ಬಳಕೆ ತೀವ್ರ ಹೆಚ್ಚಳವಾಗುತ್ತಿದ್ದು, ಇದು 5000 ಮೆಗಾವ್ಯಾಟ್‌ಗೆ ತಲುಪುತ್ತಿದೆ.
ವಿದ್ಯುತ್ ಬಳಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ77.3981 ಮಿಲಿಯನ್ ಯುನಿಟ್ ಆಮದು ಮಾಡಿಕೊಳ್ಳಲಾಗಿದೆ. ಜೊತೆಗೆ ಉತ್ಪಾದನೆಯಲ್ಲಿ ಕೂಡಾ ಹೆಚ್ಚಳ ಮಾಡಲಾಗುತ್ತಿದೆ.
ಕೇರಳದಲ್ಲಿ 102.9985 ಮಿಲಿಯನ್ ಯುನಿಟ್ ಬಳಕೆ ಸಾರ್ವಕಾಲಿಕ ದಾಖಲೆಯಾಗಿದ್ದು, ಈ ಬಾರಿಯ ಬೆಳವಣಿಗೆ ಗಮನಿಸಿದರೆ ಬಳಕೆಯ ಯುನಿಟ್ ಶೀಘ್ರದಲ್ಲೇ 100 ಮಿಲಿಯನ್ ದಾಟುವ ಎಲ್ಲಾ ಲಕ್ಷಣ ಗೋಚರಿಸುತ್ತಿದೆ.