BIG NEWS | ಕೇರಳ ವಿವಿ ವಿದ್ಯಾರ್ಥಿನಿಯರಿಗೆ ಪೀರಿಯಡ್ಸ್ ರಜೆ, ದೇಶದಲ್ಲಿ ಇದೇ ಮೊದಲು!

ಹೆಣ್ಣು ಮಕ್ಕಳು ಮುಟ್ಟಿನ ಸಮಯದಲ್ಲಿ ಅನುಭವಿಸುವ ನೋವು ಹೇಳತೀರದು. ಈ ಹಿನ್ನೆಲೆಯಲ್ಲಿ
ಮಹತ್ವದ ನಿಲುವೊಂದನ್ನು ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯವು ತೆಗೆದುಕೊಂಡಿದೆ.

ಪ್ರತಿ ಸೆಮಿಸ್ಟರ್ ನಲ್ಲಿ ಹಾಜರಾತಿ ಕೊರತೆಯಿರುವ ವಿದ್ಯಾರ್ಥಿನಿಯರು 2%ರಷ್ಟು ಹೆಚ್ಚುವರಿ ಹಾಜರಾತಿಯನ್ನು ಮುಟ್ಟಿನ ಪ್ರಯೋಜನಗಳು ಅಡಿಯಲ್ಲಿ ಪಡೆಯಬಹುದು ಎಂದು ವಿವಿ ಹೇಳಿದೆ.ಕೇರಳದ ಉನ್ನತ ಶಿಕ್ಷಣ ಸಂಸ್ಥೆಯ ಅಪರೂಪದ ಕ್ರಮವಿದಾಗಿದೆ.

ಆದೇಶದ ಪ್ರಕಾರ ವಿಶ್ವವಿದ್ಯಾನಿಲಯದಲ್ಲಿ ಪಿಹೆಚ್‌ಡಿ ವ್ಯಾಸಂಗ ಮಾಡುತ್ತಿರುವವರು ಸೇರಿದಂತೆ ಎಲ್ಲಾ
ಸ್ಟ್ರೀಮ್ಗ‌ಳ ವಿದ್ಯಾರ್ಥಿನಿಯರಿಗೆ ಹೊಸ ಯೋಜನೆ ಅನ್ವಯಿಸುತ್ತದೆ ಮತ್ತು ಈ ಕ್ಷಣದಿಂದಲೇ ಜಾರಿಗೆ ಬರುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!