ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಮೊದಲ ತೃತೀಯಲಿಂಗಿ ಬಾಡಿ ಬಿಲ್ಡರ್ ಪ್ರವೀಣ್ ನಾಥ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೇರಳದ ಉಪನಗರದ ನಮ್ಮ ಮನೆಯಲ್ಲಿ ವಿಷ ಕುಡಿದು ಪ್ರವೀಣ್ ಪ್ರಾಣ ಕಳೆದುಕೊಂಡಿದ್ದಾರೆ.
ಇದೇ ವರ್ಷ ಪ್ರೇಮಿಗಳ ದಿನದಂದು ಪ್ರವೀಣ್ ರಿಷಾನಾ ಆಯೇಶು ಅವರನ್ನು ಮದುವೆಯಾಗಿದ್ದರು. ವೈವಾಹಿಕ ಜೀವನದಲ್ಲಿ ನೆಮ್ಮದಿ ಇಲ್ಲದಿರುವುದು ಪ್ರವೀಣ್ ಸಾವಿಗೆ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದೆ. ಮಿಸ್ಟರ್ ಕೇರಳ ಪ್ರಶಸ್ತಿ ಪಡೆದ ಪ್ರವೀಣ್, ಮಿಸ್ ಮಲಬಾರ್ ಪಟ್ಟ ಗೆದ್ದ ರಿಷಾನಾರನ್ನು ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದರು.
ಹೆಣ್ಣಾಗಿ ಹುಟ್ಟಿದ್ದ ಪ್ರವೀಣ್‌ಗೆ ಗಂಡಾಗಿ ಬದುಕುವ ಆಸೆಯಿದ್ದು, ಶಸ್ತ್ರಚಿಕಿತ್ಸೆ ಮೂಲದ ದೇಹದ ರೂಪಾಂತರ ಮಾಡಿಕೊಂಡು ಕಷ್ಟದ ಹಾದಿಯಿಂದ ಮೇಲೆ ಬಂದಿದ್ದರು. ಸಾಮಾಜಿಕ ತೊಡಕುಗಳ ನಡುವೆಯೂ ಮಿಸ್ಟರ್ ಕೇರಳ ಪಟ್ಟ ಗೆದ್ದಿದ್ದರು.