ವಕೀಲರಾಗಿ ಆಯ್ಕೆಯಾದ ಕೇರಳದ ಮೊದಲ ತೃತೀಯಲಿಂಗಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕೇರಳ (Kerala)ದ ಬಾರ್ ಕೌನ್ಸಿಲ್‌ನ ಮೊದಲ ತೃತೀಯಲಿಂಗಿ (Transgender) ವಕೀಲರಾಗಿ (Lawyer) ಪದ್ಮಲಕ್ಷ್ಮಿ (Padma Lakshmi) ಅವರು ಆಯ್ಕೆಯಾಗಿದ್ದಾರೆ.

ಈ ಕುರಿತು ಕೈಗಾರಿಕಾ ಸಚಿವ ಪಿ.ರಾಜೀವ್ (P.Rajeev) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೀವನದ ಎಲ್ಲಾ ಅಡೆತಡೆಗಳನ್ನು ಎದುರಿಸಿ ಕೇರಳದ ಮೊದಲ ತೃತೀಯಲಿಂಗಿ ವಕೀಲರಾಗಿ ಆಯ್ಕೆಯಾದ ಪದ್ಮಲಕ್ಷ್ಮಿಯವರಿಗೆ ಅಭಿನಂದನೆಗಳು. ಮೊದಲಿಗರಾಗುವುದು ಇತಿಹಾಸದಲ್ಲಿ ಕಠಿಣವಾಗಿದೆ. ಗುರಿಯ ಹಾದಿಯಲ್ಲಿ ಅಡೆತಡೆಗಳಿರುತ್ತದೆ. ಅಲ್ಲಿ ನಿರುತ್ಸಾಹಗೊಳಿಸುವ ಜನರು ತುಂಬಾ ಇರುತ್ತಾರೆ. ಆದರೆ ಪದ್ಮಲಕ್ಷ್ಮಿಯವರು ಇವೆಲ್ಲವನ್ನೂ ಮೀರಿ ಕಾನೂನು ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಇವರ ಜೀವನವು ಉಳಿದ ಮಂಗಳಮುಖಿಯರು ವಕೀಲ ವೃತ್ತಿಗೆ ಬರಲು ಸ್ಫೂರ್ತಿಯಾಗಲಿ ಎಂದು ಪಿ.ರಾಜೀವ್ ಆಶಯ ವ್ಯಕ್ತಪಡಿಸಿದ್ದಾರೆ.

ಪದ್ಮಲಕ್ಷ್ಮಿಯವರು ಎರ್ನಾಕುಲಂನ (Ernakulam) ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪದವಿಯನ್ನು ಪಡೆದಿದ್ದಾರೆ.

ಭಾರತದ ಮೊದಲ ತೃತೀಯಲಿಂಗಿ ನ್ಯಾಯಾಧೀಶೆ (Judge) ಎಂಬ ಹೆಗ್ಗಳಿಕೆಗೆ ಜೋಯಿತಾ ಮೊಂಡಲ್ (Joyita Mondal) ಪಾತ್ರರಾಗಿದ್ದಾರೆ. ಇವರು 2017ರಲ್ಲಿ ಪಶ್ಚಿಮ ಬಂಗಾಳದ (West Bengal) ಇಸ್ಲಾಂಪುರದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶೆಯಾಗಿ ನೇಮಕಗೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!