ಹಿಮಾಲಯ ಪರ್ವತದ 4,800 ಮೀಟರ್ ಎತ್ತರದಲ್ಲಿ ಗೆಲುವಿನ ನಗೆ ಬೀರಿದ ಕೇರಳದ ಮೇರಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹಿಮಾಲಯ ಪರ್ವತದಲ್ಲಿ 4,800 ಮೀಟರ್ ಎತ್ತರ ಏರುವ ಮೂಲಕ ಕೇರಳದ ಹೈಸ್ಕೂಲ್ ವಿದ್ಯಾರ್ಥಿನಿಯೋರ್ವಳು ದೇಶದ ಹುಬ್ಬೇರಿಸಿದ್ದಾರೆ!

ಚೇರ್ತಲ ಚೇರ್ತಲ ಸೈಂಟ್ ಮೇರಿಸ್ ಬಾಲಕಿಯರ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ, ಚೇರ್ತಲ ಪುರಸಭೆ 33ನೇ ವಾರ್ಡ್ ಅಂಜರಾಯಕಾವೆಲ್‌ನ ನಿವಾಸಿ ಶೈನ್ ವರ್ಗೀಸ್, ಪ್ರೀತಿ ದಂಪತಿಯ ಪುತ್ರಿ ಅನ್ನಾ ಮೇರಿ, ಜೂ.20ರಂದು ಈ ಸಾಹಸಕ್ಕೆ ತನ್ನ ತಂದೆಯೊಂದಿಗೆ ತೆರಳಿದ್ದಳು. ಈಕೆಯೊಂದಿಗೆ ಹರ್ಯಾಣದ ೮ನೇ ತರಗತಿ ವಿದ್ಯಾರ್ಥಿನಿ ಆರಾಧ್ಯ ಸಹಿತ ಎಂಟು ರಾಜ್ಯಗಳ 13 ಮಂದಿ ಇದ್ದರು.

ಇನ್ನು 500 ಮೀಟರ್ ಎತ್ತರಕ್ಕೆ ಏರಿದ್ದರೆ ತಮ್ಮ ಗಮ್ಯ ಸ್ಥಳವಾದ ಫ್ರೆಂಡ್ಸ್ ಶಿಪ್ ಪೀಕ್ ತುದಿ ತಲುಪಬಹುದಿತ್ತಾದರೂ ದೈಹಿಕ ಅಸ್ವಸ್ಥತೆ ಕಾರಣ ಸಾಹಸವನ್ನು ಅಲ್ಲಿಗೆ ಕೈಬಿಡಬೇಕಾಯಿತು ಎಂದಿದ್ದಾರೆ ಮೇರಿ. ಹಿಮಾಲಯ ಏರಲು ಈಕೆ ಕೊಚ್ಚಿ ಕಡವಂತರದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ತರಬೇತಿ ಪಡೆದಿದ್ದಾರೆ. ತನ್ನ ಮುಂದಿನ ಗುರಿ ಆಫ್ರಿಕಾದ ಉಪಖಂಡದ ಅತಿ ಎತ್ತರದ ಪರ್ವತವಾದ ಕಿಲಿಮಂಜಾರೊವನ್ನು ಏರುವುದು ಎನ್ನುತ್ತಾರೆ ಆಕೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!