March 12, 2026
Thursday, March 12, 2026
spot_img

ಕೇರಳದಲ್ಲಿ ಅತೀ ಕಿರಿಯ ಅಂಗಾಂಗ ದಾನಿ: 10 ತಿಂಗಳ ಕಂದಮ್ಮನಿಂದ 5 ಮಕ್ಕಳಿಗೆ ಜೀವದಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಪಘಾತದಲ್ಲಿ ಮೃತಪಟ್ಟ ಪುಟ್ಟ ಮಗುವಿನ ಅಂಗಾಂಗ ದಾನದಿಂದ ಐದು ಮಕ್ಕಳಿಗೆ ಜೀವದಾನ ಸಿಕ್ಕ ಘಟನೆ ಕೇರಳದಲ್ಲಿ ನಡೆದಿದೆ. ಅರುಣ್ ಮತ್ತು ಶೆರಿನ್ ದಂಪತಿಯ 10 ತಿಂಗಳ ಮಗಳು ಅಲಿನ್ ಶೆರಿನ್ ಅಬ್ರಹಾಂ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಳು. ದುಃಖದ ನಡುವೆಯೂ ಪೋಷಕರು ತಾಳ್ಮೆ ತೋರಿಸಿ, ಆಕೆಯ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಿದ್ದಾರೆ.

ಫೆಬ್ರವರಿ 5ರಂದು ಕೊಟ್ಟಾಯಂದಿಂದ ಪ್ರಯಾಣಿಸುತ್ತಿದ್ದಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಗು ತೀವ್ರವಾಗಿ ಗಾಯಗೊಂಡಿತ್ತು. ಮೊದಲಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ನಂತರ ಕೊಚ್ಚಿಯಲ್ಲಿನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಮಿದುಳು ನಿಷ್ಕ್ರಿಯಗೊಂಡಿದ್ದರಿಂದ ಫೆಬ್ರವರಿ 10ರಂದು ವೈದ್ಯರು ಮಗುವಿನ ನಿಧನವನ್ನು ಘೋಷಿಸಿದ್ದರು.

ಇದನ್ನೂ ಓದಿ:

ಪೋಷಕರ ಒಪ್ಪಿಗೆಯೊಂದಿಗೆ ಕಣ್ಣು, ಹೃದಯ, ಮೂತ್ರಪಿಂಡ ಸೇರಿದಂತೆ ಪ್ರಮುಖ ಅಂಗಾಂಗಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾನ ಮಾಡಲಾಗಿದ್ದು, ಐದು ಮಕ್ಕಳಿಗೆ ಹೊಸ ಬದುಕಿನ ಅವಕಾಶ ದೊರಕಿತು. ಅಂಗಾಂಗ ಸಾಗಣೆಗೆ ಪೊಲೀಸರು ವಿಶೇಷ ವ್ಯವಸ್ಥೆ ಮಾಡಿದ್ದು, ಈ ಘಟನೆ ಮಾನವೀಯತೆಗೆ ನಿದರ್ಶನವಾಗಿ ಎಲ್ಲರ ಮನ ಮುಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !