ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ನಗರದ ಸಂಘನಿಕೇತನದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ 77 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಿಧ್ಯುಕ್ತ ಚಾಲನೆಯು ದೀಪ ಬೆಳಗಿಸುವುದರ ಮೂಲಕ ಪ್ರಾರಂಭಗೊಂಡಿತು.
ಅರಿನ್ ಕ್ಯಾಪಿಟಲ್ ಚೇರ್ಮನ್ , ಮಣಿಪಾಲ್ ಗ್ಲೋಬಲ್ ಎಜುಕೇಶನ್ ಇದರ ಟಿ. ವಿ. ಮೋಹನದಾಸ್ ಪೈ ಸಂಭ್ರಮಕ್ಕೆ ಚಾಲನೆ ನೀಡಿದರು.
ಶ್ರೀ ಮಹಾಗಣಪತಿ ಪ್ರತಿಷ್ಠೆ ಹಾಗೂ ಉತ್ಸವದ ಉದ್ಘಾಟನೆ ನಡೆಯಿತು. ಬಳಿಕ ಧ್ವಜಾರೋಹಣ, ವಂದೇಮಾತರಂ, ಗಣಹೋಮ, ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಸಭಾ ಕಾರ್ಯಕ್ರಮ ನೆರವೇರಿತು.
ಮಧ್ಯಾಹ್ನ ಮಹಾ ಪೂಜೆ ಸಾಯಂಕಾಲ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಐದು ದಿನಗಳ ಪರ್ಯಂತ ವಿಶೇಷ ಕಾರ್ಯಕ್ರಮಗಳನ್ನು ಸಮಿತಿಯು ಆಯೋಜಿಸಿದ್ದು ಸಹಸ್ರಾರು ಭಜಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಸಂಘಚಾಲಕ್ ಡಾ. ಪಿ. ವಾಮನ ಶೆಣೈ, ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ವಿನೋದ್ ಶೆಣೈ, ರಘುವೀರ್ ಕಾಮತ್, ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್, ಸತೀಶ್ ಪ್ರಭು, ಆನಂದ ಪಾಂಗಳ, ಕೆ. ಪಿ. ಟೈಲಾರ್, ಸುರೇಶ್ ಕಾಮತ್, ಸ್ವಮಿಪ್ರಸಾದ್, ಯಸ್ ಆರ್ ಕುಡ್ವ, ಜೀವನರಾಜ್ ಶೆಣೈ, ಅಭಿಷೇಕ್ ಭಂಡಾರಿ, ನಂದನ್ ಮಲ್ಯ, ಪೂರ್ಣಿಮಾ ಶೆಣೈ, ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಮಹಾಪೌರ ಸುಧೀರ್ ಶೆಟ್ಟಿ ಹಾಗೂ ನೂರಾರು ಸ್ವಯಂಸೇವಕರು ಉಪಸ್ಥಿತರಿದ್ದರು.
ಚಿತ್ರ: ಮಂಜು ನೀರೇಶ್ವಾಲ್ಯ