ಹುಂಡೈ ಬಳಿಕ ಕಾಶ್ಮೀರ ಪ್ರತ್ಯೇಕಿಸಲು ಬೆಂಬಲಿಸಿದ ಕೆಎಫ್‌ ಸಿ, ಪಿಜ್ಜಾ ಹಟ್‌: ನೆಟ್ಟಿಗರು ಫುಲ್‌ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಿನ್ನೆಯಷ್ಟೆ ಕಾಶ್ಮೀರವನ್ನು ಪ್ರತ್ಯೇಕಗೊಳಿಸಲು ಬೆಮಬಲಿಸಿ ಪೇಚಿಗೆ ಸಿಲುಕಿದ ಹುಂಡೈ ಕಾರು ಸಂಸ್ಥೆಯ ನಂತರ ಈಗ ಕೆಎಫ್‌ ಸಿ ಅದೇ ಎಡವಟ್ಟು ಮಾಡಿಕೊಂಡಿದೆ.
ಪಾಕಿಸ್ತಾನ ಮೂಲದ ಫ್ರಾಂಚೈಸಿ ಹೊಂದಿರುವ ಕ್ವಿಕ್‌ ಸರ್ವಿಸ್‌ ರೆಸ್ಟೋರೆಂಟ್‌ ಚೈನ್‌ ವಿಭಾಗದ ಕೆಎಫ್‌ ಸಿ ಹಾಗೂ ಪಿಜ್ಜಾ ಹಟ್ ಕಾಶ್ಮೀರವನ್ನು ಪ್ರತ್ಯೇಕಗೊಳಿಸಲು ಬೆಂಬಲಿಸಿದೆ

Image
ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಜಾಲತಾಣಿಗರು ಎರಡೂ ಸಂಸ್ಥೆ ವಿರುದ್ದ ಹರಿಹಾಯ್ದರು. ತಕ್ಷಣ ತಪ್ಪೊಪ್ಪಿಕೊಂಡ ಪಿಜ್ಜಾ ಹಟ್‌ ತಾನು ಪಾಕಿಸ್ತಾನದ ಸಾಮಾಜಿಕ ಜಾಲತಾಣದ ಪೋಸ್ಟ್‌ ಅನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದೆ.

ಕೆಎಫ್‌ ಸಿ ಕೂಡ ಹೊರಗಿನ ಕೆಲವು ಕೆಎಫ್‌ ಸಿ ಫ್ರಾಂಚೈಸಿಗಳುಸಾಮಾಜಿಕ ಮಾಧ್ಯಮ ಚಾನೆಲ್‌ಗಳಲ್ಲಿ ಪ್ರಕಟಿಸಿದ ಪೋಸ್ಟ್‌ಗಾಗಿ ನಾವು ತೀವ್ರವಾಗಿ ಕ್ಷಮೆಯಾಚಿಸುತ್ತೇವೆ. ನಾವು ಭಾರತವನ್ನು ಗೌರವಿಸುತ್ತೇವೆ ಮತ್ತು ಎಲ್ಲಾ ಭಾರತೀಯರಿಗೆ ಹೆಮ್ಮೆಯಿಂದ ಸೇವೆ ಸಲ್ಲಿಸುವ ನಮ್ಮ ಬದ್ಧತೆಯಲ್ಲಿ ದೃಢವಾಗಿರುತ್ತದೆ ಎಂದು  ಕೆಎಫ್‌ಸಿ ಇಂಡಿಯಾ ಟ್ವಿಟರ್‌ನಲ್ಲಿ ಕ್ಷಮೆಯಾಚಿಸಿದೆ.

#BoycottKFC ಮತ್ತು #BoycottPizzaHut ಎಂಬ ಹ್ಯಾಷ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡ್ ಆಗುತ್ತಿದ್ದಂತೆ ಎರಡೂ ಪೋಸ್ಟ್ ಗಳನ್ನು ಖಾತೆಯಿಂದ ತೆಗೆದುಹಾಕಲಾಗಿದ್ದು, ಸಂಸ್ಥೆಗಳು ಕ್ಷಮೆಯಾಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!