ಹೊಸದಿಗಂತ ವರದಿ ಮಡಿಕೇರಿ:
ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಿ.ವೈ.ವಿಜಯೇಂದ್ರ ಅವರನ್ನು ಕೊಡಗು ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು.
ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರ ನೇತೃತ್ವದಲ್ಲಿ ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿದ ಬಿಜೆಪಿ ಕಾರ್ಯಕರ್ತರು, ಬಿ.ವೈ.ವಿಜಯೇಂದ್ರ ಅವರನ್ನು ಸನ್ಮಾನಿಸಿ, ಅಭಿನಂದಿಸಿದರು.
ಇದೇ ಸಂದರ್ಭ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೂ ಭೇಟಿ ಮಾಡಿ ಹೂಗುಚ್ಛ ನೀಡಿ ಶುಭ ಕೋರಿದರು.
ಈ ಸಂದರ್ಭ ಕೊಡಗು ಬಿಜೆಪಿ ಮಾಜಿ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಮಡಿಕೇರಿ ಮಂಡಲ ಅಧ್ಯಕ್ಷ ಕಾಂಗಿರ ಸತೀಶ್, ಅಶ್ವಿನ್, ಪಕ್ಷದ ಮುಖಂಡರಾದ ಕಾಳನ ರವಿ, ಮಲ್ಲಂಡ ಮಧು ದೇವಯ್ಯ, ಕೀರ್ತನ್ ಕಡ್ಲೇರ, ವಿಷ್ಣು, ಮಾಚಿಮಂಡ ಸುವಿನ್, ವೀರಾಜಪೇಟೆ ಮಂಡಲ ಸಾಮಾಜಿಕ ಜಾಲತಾಣ ಸಂಚಾಲಕ ಚಿರಿಯಪಂಡ ಸಚಿನ್ ಪೆಮ್ಮಯ್ಯ, ಜಿಲ್ಲಾ ಸಹ ಸಂಚಾಲಕ ಜೀತು ಪೂಜಾರಿ, ಪಟ್ರಪಂಡ ಸುಯೋಗ್ ಕಾರ್ಯಪ್ಪ, ಚಂಗುಲಂಡ ಸಂಪತ್, ತೀತಿಮಾಡ ಪವಿ ಪೊನ್ನಪ್ಪ, ದೇಯಂಡ ನಿತಿನ್, ಚಿರಿಯಪಂಡ ಸರ್ವಿನ್ ಹಾಜರಿದ್ದರು.