ತಮ್ಮ ವಿರೋಧ, ಅಣ್ಣ ಪರ- ಯತೀಂದ್ರ ಸಿದ್ದರಾಮಯ್ಯ ವಿಡಿಯೋ ಬಗ್ಗೆ ರೇವಣ್ಣ ಏನಂದ್ರು ನೋಡಿ? 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯತೀಂದ್ರ ಸಿದ್ದರಾಮಯ್ಯ ವೈರಲ್‌ ವಿಡಿಯೋ ಬಗ್ಗೆ ಜೆಡಿಎಸ್‌ ಪಾಳಯದಲ್ಲಿಯೇ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಅತ್ತ ಕುಮಾರಸ್ವಾಮಿ ಟ್ವೀಟ್‌ ಮಾಡಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದರೆ, ಇತ್ತ ರೇವಣ್ಣ ಯತೀಂದ್ರ ಪರವಾಗಿ ಬ್ಯಾಟಿಂಗ್‌ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ.

ಹಾಸನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್.ಡಿ.ರೇವಣ್ಣ, ʻಯತೀಂದ್ರ ಶಾಸಕರಾಗಿದ್ದವರು, ಒಂದು ಕ್ಷೇತ್ರದ ಜವಾಬ್ದಾರಿ ಇದೆ ಅಂದ ಮೇಲೆ ಕೆಲಸ ಮಾಡಿಸೋದು ಸಹಜ. ಅಲ್ಲದೆ ಅವರದ್ದೇ ಸರಕಾರ ಅಧಿಕಾರದಲ್ಲಿದೆ ಹೀಗಿರುವಾಗ ಇಂತಹ ಕೆಲಸ ಮಾಡಬೇಕು ಎಂದು ಹೇಳಿರುತ್ತಾರೆ. ಇದು ತಪ್ಪಾ? ಎಂದು ಪ್ರಶ್ನಿಸಿದರು. ಇಂತಹ ವಿಚಾರಗಳಲ್ಲಿ ಕೇವಲವಾಗಿ ನಾನು ಮಾತನಾಡೋದಿಲ್ಲ ಎಂದರು.

ಕುಮಾರಸ್ವಾಮಿ ಪಿಡ್ಲ್ಯೂಡಿ ಸಚಿವರಾಗಿದ್ದಾಗ ನಾನು ಅವರ ಕ್ಷೇತ್ರವನ್ನು ನೋಡಿಕೊಳ್ತಿದ್ದೆ. ಈಗ ಅವರ ತಂದೆ ಅಧಿಕಾರದಲ್ಲಿದ್ದಾರೆ ಯಾವುದೋ ಅಭಿವೃದ್ಧಿ ಕೆಲಸ ಬಗ್ಗೆ ಮಾತನಾಡಿರುತ್ತಾರೆ. ಕ್ಷೇತ್ರದ ಮೇಲೆ ಜವಾಬ್ದಾರಿ ಅಂಥ ಬಂದಾಗ ಇಂತಹ ಮಾತುಗಳು ಬಂದಿರುತ್ತವೆ ಎಂದು ಯತೀಂದ್ರ ಪರ ರೇವಣ್ಣ ಬ್ಯಾಟಿಂಗ್‌ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!