ಹೊಸ ದಿಗಂತ ವರದಿ, ಕಲಬುರಗಿ:
ಕಲಬುರಗಿ ಮಂದಿ ನಮಸ್ಕಾರ. ಹೇಗಿದಿರಾ ಎಲ್ಲರೂ. ಎಲ್ಲಿ ನನ್ನ ಜೋಳದ ರೊಟ್ಟಿ, ಎಲ್ಲಿ ನನ್ನ ಶೇಂಗಾ ಚಟ್ನಿ,ಅವಲಕ್ಕಿ ಹಾಗೂ ಸುಸಲಾ ಎಲ್ಲಿ ಎಂದು ಕೇಳುವ ಮೂಲಕ ಉತ್ತರ ಕನಾ೯ಟಕದ ವಿಶೇಷ ಊಟದ ಬಗ್ಗೆ ಪ್ರಸ್ತಾಪ ಮಾಡಿ,ಕಲಬುರಗಿ ಮಂದಿಯ ಪ್ರೀತಿಗೆ ನಾನು ಸದಾ ಚಿರರುಣಿಯಾಗಿದ್ದೇನೆ ಎಂದು ಹೇಳುವ ಮೂಲಕ ಕೆಜಿಎಫ್ ಚಿತ್ರದ ನಟಿ ಶ್ರೀನಿಧಿ ಶೆಟ್ಟಿ ಪ್ರೇಕ್ಷರತ್ತ ಕೈಬೀಸಿದರು.
ನಗರದ ಲಾಹೋಟಿ ಪೆಟ್ರೋಲ್ ಬಂಕ್ ಎದುರಿಗಡೆಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್,ನ ಮರು ನವೀಕರಿಸಿದ ಅಂಗಡಿಯ ಉದ್ಗಾಟನೆಗೆ ಆಗಮಿಸಿ ಮಾತನಾಡಿದ ಅವರು,ನಾನು ಮೊದಲ ಬಾರಿಗೆ ಕಲಬುರಗಿ ಬಂದಿದ್ದು,ನಿಮ್ಮ ಪ್ರೀತಿ ನೋಡಿ ನನಗೆ ಅತ್ಯಂತ ಖುಷಿ ಆಯ್ತು. ನಾನು ಎರಡು ಗಂಟೆ ತಡವಾಗಿ ಬಂದಿದ್ದಕ್ಕೆ ನಿಮ್ಮೆಲ್ಲರ ಬಳಿ ಕ್ಷಮೇ ಕೇಳುತ್ತೇನೆ ಎಂದು ಹೇಳಿದರು.
ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಅಂಗಡಿಯಲ್ಲಿ ಒಳ್ಳೆಯ ಆಭರಣ ಸಿಗುತ್ತಿದ್ದು,ನೀವೆಲ್ಲರೂ ಖರೀದಿಸುವ ಮೂಲಕ ಇಲ್ಲಿಯ ವಜ್ರಾಭರಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದು ಸಭೀಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮ್ಯಾನೇಜಮೆಂಟ್ ಮುಖ್ಯಸ್ಥರಾದ ನಿದೇ೯ಶಕ ಮಂಜೂರ್ ಅಹ್ಮದ್, ಮೋಹನ್ ಮೋಗಲಪ್ಪಾ,ಫಿಲಸೂರ್ ಬಾಬು,ಅಸಿಸ್ಟೆಂಟ್ ಡೈರೆಕ್ಟರ್ ಜಿಸ್ನೂ,ಡಾ.ದತ್ತು, ನಿಖಿಲ್,ಸುಸ್ಮಾ ಮಾಟೀ೯ನ,ಸ್ನೇಹಾ, ಸಚಿನ ಗೋನಾಯಕ ಇದ್ದರು.