ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತೀವ್ರ ಕುತೂಹಲ ಸೃಷ್ಟಿಸಿದ್ದ ವಿಶ್ವ ಚೆಸ್ ಪಂದ್ಯಾವಳಿಯಲ್ಲಿ ಗುರುವಾರ ನಡೆದ ಫೈನಲ್ ಟೈ ಬ್ರೇಕರ್ ಸ್ಪರ್ಧೆಯಲ್ಲಿ ಭಾರತದ ಆರ್. ಪ್ರಜ್ಞಾನಂದ ಎರಡೂ ಸುತ್ತಿನಲ್ಲೂ ಸೋಲು ಕಂಡಿದ್ದು, ನಿರಾಸೆ ಅನುಭವಿಸಿದ್ದು, ಮ್ಯಾಗ್ನಸ್ ಕಾರ್ಲ್ಸನ್ ವಿಶ್ವ ಕಪ್ ಗೆದ್ದಿದ್ದಾರೆ.
ಟೈ ಬ್ರೇಕರ್‌ನಲ್ಲಿ ಇಬ್ಬರೂ ತಲಾ 10 ನಿಮಿಷಗಳ 2 ರ‍್ಯಾಪಿಡ್ ಗೇಮ್‌ಗಳನ್ನು ಆಡಿದ್ದು, ಎರಡರಲ್ಲೂ ಪ್ರಜ್ಞಾನಂದ ನಾರ್ವೇ ಚೆಸ್ ಮಾಸ್ಟರ್ ಎದುರು ಸೋಲನ್ನಭವಿಸಿದರು.