October 10, 2026
Saturday, October 10, 2026
spot_img

ಖಮೇನಿಯ 14 ತಿಂಗಳ ಮೊಮ್ಮಗಳೂ ಯುದ್ಧಕ್ಕೆ ಬಲಿ: ತಾತನ ಜೊತೆ ಮಗುವಿನ ಪುಟ್ಟ ಶವಪೆಟ್ಟಿಗೆ ಅನಾವರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇರಾನ್‌ನ ಸರ್ವೋಚ್ಛ ನಾಯಕ ಅಲಿ ಖಮೇನಿ ಅಂತ್ಯಕ್ರಿಯೆ ಇಂದಿನಿಂದ ಅಧಿಕೃತವಾಗಿ ಟೆಹ್ರಾನ್‌ನಲ್ಲಿ ಆರಂಭವಾಗಿದೆ. ಖಮೇನಿಯ ಶವಪೆಟ್ಟಿಗೆ ಪಕ್ಕದಲ್ಲಿಯೇ ಯುದ್ಧಕ್ಕೆ ಬಲಿಯಾದ ಮೊಮ್ಮಗಳ ಪುಟ್ಟ ಶವಪೆಟ್ಟಿಗೆಯನ್ನು ಇಡಲಾಗಿದೆ.

ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಖಮೇನಿ ಹತ್ಯೆಗೀಡಾಗಿದ್ದರು. 86 ವರ್ಷದ ನಾಯಕನಿಗೆ ಗೌರವ ಸಲ್ಲಿಸಲು ಸಾವಿರಾರು ಇರಾನಿಯನ್ನರು ಸೇರಿದ್ದರು. ಖಮೇನಿ ಶವಪೆಟ್ಟಿಗೆಗೆ ಇಸ್ಲಾಮಿಕ್ ಗಣರಾಜ್ಯದ ಧ್ವಜವನ್ನು ಹೊದಿಸಿ, ಅದರ ಮೇಲೆ ಕಪ್ಪು ಪೇಟವನ್ನು ಇರಿಸಲಾಯಿತು. ಮೃತ ಸಂಬಂಧಿಕರ ಶವಗಳನ್ನು ಖಮೇನಿ ಪಕ್ಕದಲ್ಲೇ ಇರಿಸಲಾಯಿತು. ಅವುಗಳ ಪೈಕಿ 14 ತಿಂಗಳ ಮೊಮ್ಮಗಳ ಸಣ್ಣ ಶವಪೆಟ್ಟಿಗೆಯೂ ಇದೆ. ಇದು ಅಲ್ಲಿದ್ದ ಜನರ ಹೃದಯ ಒಡೆದು ಚೂರು ಚೂರಾಗುವಂತೆ ಮಾಡಿದೆ.

ಇಸ್ಲಾಮಿಕ್ ಗಣರಾಜ್ಯದ ನೂರಾರು ಬೆಂಬಲಿಗರು ಶುಕ್ರವಾರ ಸಂಜೆ ಟೆಹ್ರಾನ್‌ನ ಗ್ರ್ಯಾಂಡ್ ಮೊಸಲ್ಲಾದ ಹೊರಗೆ ಸಾರ್ವಜನಿಕರಿಗೆ ಮುಕ್ತವಾಗಲು ಕಾಯುತ್ತಿದ್ದರು. ಮುಂದಿನ ಮೂರು ದಿನಗಳಲ್ಲಿ ಟೆಹ್ರಾನ್‌ನಲ್ಲಿ ಮಾತ್ರ 1.50 ಯಿಂದ 2 ಕೋಟಿ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Must Read