ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಇಸ್ರೇಲ್–ಅಮೆರಿಕ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಹಿನ್ನೆಲೆ, ಇರಾನ್‌ನಲ್ಲಿ ಮುಂದಿನ ನಾಯಕತ್ವದ ಕುರಿತು ಚರ್ಚೆ ತೀವ್ರಗೊಂಡಿದೆ. ಈ ಕುರಿತು ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲದಿದ್ದರೂ, ರಾಜಕೀಯ ವಲಯದಲ್ಲಿ ಹಲವು ಹೆಸರುಗಳು ಮುಂದಕ್ಕೆ ಬರುತ್ತಿವೆ.
ಸಂಭಾವ್ಯ ಉತ್ತರಾಧಿಕಾರಿಗಳ ಪಟ್ಟಿಯಲ್ಲಿ ಖಮೇನಿಯವರ ಪುತ್ರ ಮೊಜ್ತಬಾ ಖಮೇನಿ ಪ್ರಮುಖರಾಗಿದ್ದಾರೆ. ಇಸ್ಲಾಮಿಕ್ ಕ್ರಾಂತಿ ರಕ್ಷಣಾ ಪಡೆಯೊಂದಿಗೆ ಅವರಿಗಿರುವ ನಿಕಟ ಸಂಪರ್ಕ ಗಮನಸೆಳೆದಿದೆ. ತಜ್ಞರ ಸಭೆಯ ಉಪಾಧ್ಯಕ್ಷ ಅಲಿರೆಜಾ ಅರಾಫಿ ಹಾಗೂ ಸರ್ವೋಚ್ಚ ನಾಯಕ ಕಚೇರಿಯ ಭದ್ರತಾ ವಿಭಾಗವನ್ನು ನೋಡಿಕೊಳ್ಳುವ ಅಲಿ ಅಸ್ಗರ್ ಹೆಜಾಜಿ ಅವರ ಹೆಸರೂ ಚರ್ಚೆಯಲ್ಲಿದೆ.
ಇದನ್ನೂ ಓದಿ:
ನ್ಯಾಯಾಂಗ ಕ್ಷೇತ್ರದಲ್ಲಿ ದೀರ್ಘ ಅನುಭವ ಹೊಂದಿರುವ ಘೋಲಮ್ ಹೊಸೇನ್ ಮೊಹ್ಸೇನಿ ಎಜೆಯಿ ಕೂಡ ಪ್ರಮುಖ ಸ್ಪರ್ಧಿಯಾಗಿ ಪರಿಗಣಿಸಲಾಗಿದೆ. ಇದಲ್ಲದೆ ಮೊಹಮ್ಮದ್ ಗೋಲ್ಪಾಯೆಗಾನಿ, ಅಲಿ ಅಕ್ಬರ್ ವೆಲಾಯತಿ, ಕಮಲ್ ಖರಾಜಿ ಮತ್ತು ಅಲಿ ಲಾರಿಜಾನಿ ಹೆಸರುಗಳೂ ಕೇಳಿಬರುತ್ತಿವೆ.
1979ರ ಇಸ್ಲಾಮಿಕ್ ಕ್ರಾಂತಿಯ ನಂತರ ರಾಜಕೀಯ ಪಯಣ ಆರಂಭಿಸಿದ ಖಮೇನಿ, 1989ರಿಂದ ಸರ್ವೋಚ್ಚ ನಾಯಕರಾಗಿ ಇರಾನ್‌ನ ರಾಜಕೀಯ, ಸೈನಿಕ ಹಾಗೂ ವಿದೇಶಾಂಗ ನೀತಿಗಳ ಮೇಲೆ ಪ್ರಭಾವ ಬೀರಿದ್ದರು. ಅವರ ಮುಂದಿನ ಉತ್ತರಾಧಿಕಾರಿ ಯಾರು ಎನ್ನುವುದು ಈಗ ಜಾಗತಿಕ ಗಮನ ಸೆಳೆದಿದೆ.



