July 1, 2026
Wednesday, July 1, 2026
spot_img

ಅರಬ್ಬೀ ಸಮುದ್ರದಲ್ಲಿ ಬೀಡುಬಿಟ್ಟ ಇಂಗ್ಲೆಂಡ್‌ ನ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ತಾರಕ್ಕೇರುತ್ತಿದ್ದು, ದಾಳಿ, ಪ್ರತಿದಾಳಿಗಳು ನಡೆಯುತ್ತಲ್ಲೇ ಇದ್ದು, ಇದರ ನಡುವೆ ಇಂಗ್ಲೆಂಡ್‌ ಅರೆಬ್ಬಿ ಸಮುದ್ರದಲ್ಲಿ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ ಎಚ್ ಎಂಎಸ್ ಅನ್ಸನ್ ಅನ್ನು ನಿಯೋಜಿಸಿದೆ.

ಎಚ್ ಎಂಎಸ್ ಅನ್ಸನ್ ಇಂಗ್ಲೆಂಡ್‌ ನ ಅತ್ಯಂತ ಶಕ್ತಿಶಾಲಿ ಪರಮಾಣು ಚಾಲಿತ ಜಲಾಂತರ್ಗಾಮಿಯಾಗಿದ್ದು, ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆ ಇದರ ಎಂಟ್ರಿ ಹೊಸ ಸಂಚಲನ ಮೂಡಿಸಿವೆ.

ಆಸ್ಟ್ರೇಲಿಯಾದ ಪರ್ತ್‌ನ ಬಂದರಿನಿಂದ ಮಾರ್ಚ್ 6 ರಂದು ಹೊರಟಿದ್ದ ಈ ಜಲಾಂತರ್ಗಾಮಿ ಅರೆಬ್ಬಿ ಸಮುದ್ರದಲ್ಲಿ ಬಂದು ನಿಂತಿರುವುದು ಇರಾನ್ ಮೇಲಿನ ಮುಂದಿನ ದಾಳಿಗೆ ಮುನ್ಸೂಚನೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ಈಗಾಗಲೇ ಇಂಗ್ಲೆಂಡ್‌ ಪ್ರಧಾನಿ ಕೀರ್ ಸ್ಟಾರ್ಮರ್, ಅಮೆರಿಕ ಸೇನೆಗೆ ಇರಾನಿನ ಮೇಲೆ ದಾಳಿ ನಡೆಸಲು ಬ್ರಿಟನ್‌ನ ನೆಲೆಗಳನ್ನು ಬಳಸಲು ಅನುಮತಿ ನೀಡಿದೆ.ಎಚ್ ಎಂಎಸ್ ಸಾಮಾನ್ಯ ಜಲಾಂತರ್ಗಾಮಿ 1,600 ಕಿಲೋಮೀಟರ್ ದೂರದಿಂದಲ್ಲೂ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಹೀಗಾಗಿ ಟ್ರಂಪ್ ಇರಾನ್ ವಿರುದ್ಧ ಮಿಲಿಟರಿ ಕ್ರಮದ ಖಡಕ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇದರ ಎಂಟ್ರಿ ದೊಡ್ಡ ಯುದ್ಧದ ಲಕ್ಷಣ ಗೋಚರಿಸುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !