ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿ ಊಹಾಪೋಹದ ವದಂತಿಗಳಿಗೆ ಮಹತ್ವ ನೀಡಿ ವರದಿಗಾರಿಕೆ ಮಾಡದಿರುವಂತೆ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಖರ್ಗೆ ಅವರೊಂದಿಗೆ ಮಾತಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಿಂದ ಅನೇಕ ಸಚಿವರು ಬಂದು ಭೇಟಿಯಾಗುತ್ತಾರೆ, ಶಿವಕುಮಾರ್ ಬರ್ತಾರೆ, ಸಿದ್ದರಾಮಯ್ಯನೂ ಬರುತ್ತಾರೆ, ಕರ್ನಾಟಕದವರು ಎಂಬ ಕಾರಣಕ್ಕೆ ಅವರೊಂದಿಗೆ ಹೆಚ್ಚು ಸಮಯ ಮಾತಾಡುತ್ತೇನೆ, ಅದನ್ನೇ ಮುಂದಿಟ್ಟುಕೊಂಡು ಊಹಾಪೋಹದ ಸುದ್ದಿಗಳನ್ನು ಬರೆಯಬೇಡಿ ಎಂದು ಹೇಳಿದ್ದಾರೆ.