ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೀದಿ ನಾಯಿಗಳು ನವಜಾತ ಶಿಶುವಿನ ತಲೆಯನ್ನು ತಿಂದಿರುವ ಆತಂಕಕಾರಿ ಘಟನೆ ಉತ್ತರ ಪ್ರದೇಶದ ಲಲಿತ್‌ಪುರದಲ್ಲಿ ನಡೆದಿದ್ದು, ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಮಂಗಳವಾರ ಲಲಿತ್‌ಪುರ ವೈದ್ಯಕೀಯ ಕಾಲೇಜಿನಲ್ಲಿ ನಾಯಿಗಳು ಮಗುವನ್ನು ತಿನ್ನುತ್ತಿರುವುದು ಕಂಡುಬಂದಿದೆ. ಜನರು ನಾಯಿಗಳನ್ನು ಓಡಿಸುವಷ್ಟರಲ್ಲಿ ಮಗುವಿನ ತಲೆಯನ್ನು ತಿಂದು ಹಾಕಿವೆ.
ಆಸ್ಪತ್ರೆ ಆಡಳಿತವು ಜವಾಬ್ದಾರಿಯಿಂದ ನುಣುಚಿಕೊಂಡಿದ್ದು, ಪೋಷಕರ ಕುಟುಂಬವು ಆಲ್ಪತ್ರೆಯ ನಿರ್ಲಕ್ಷ್ಯವನ್ನು ಖಂಡಿಸಿದೆ. ಭಾನುವಾರ ಲಲಿತ್‌ಪುರ ವೈದ್ಯಕೀಯ ಕಾಲೇಜಿನ ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಮಗು ಕಡಿಮೆ ತೂಕ ಹೊಂದಿದ್ದರಿಂದ ವಿಶೇಷ ನವಜಾತ ಆರೈಕೆ ಘಟಕಕ್ಕೆ ದಾಖಲಿಸಲಾಗಿತ್ತು.
ಮಗುವು ಜನ್ಮಜಾತ ದೋಷಗಳೊಂದಿಗೆ ಜನಿಸಿತ್ತು. ಮಗುವಿನ ತಲೆ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರಲಿಲ್ಲ. ಬೆನ್ನುಮೂಳೆಯೂ ಇರಲಿಲ್ಲ ಮತ್ತು 1.3 ಕೆಜಿ ತೂಕವಿತ್ತು. ನಾವು ಅದನ್ನು ಎಸ್‌ಎನ್‌ಸಿಯು ಸ್ಥಳಾಂತರಿಸಿದೆವು. ಆಗ ಮಗು ಪ್ರತಿ ನಿಮಿಷಕ್ಕೆ 80 ಬಾರಿ ಹೃದಯ ಬಡಿತವನ್ನು ಹೊಂದಿತ್ತು. ಮಗು ಬದುಕುವ ಬಗ್ಗೆ ನಮಗೆ ಖಾತರಿ ಇರಲಿಲ್ಲ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಡಾ ಮೀನಾಕ್ಷಿ ಸಿಂಗ್ ಹೇಳಿದ್ದಾರೆ.
ವೈದ್ಯರು ಹೇಳಿದ ಪ್ರಕಾರ, ಸಂಜೆ ವೇಳೆಗೆ ಮಗು ಸಾವಿಗೀಡಾಗಿದೆ. ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಮಗುವಿನ ಚಿಕ್ಕಮ್ಮ ಮೃತದೇಹವನ್ನು ತೆಗೆದುಕೊಂಡರು. ನಾವು ಚಿಕ್ಕಮ್ಮನ ಥಂಬ್ ಇಂಪ್ರೆಷನ್ ಅನ್ನು ಹೊಂದಿದ್ದೇವೆ’ ಎಂದು ಡಾ. ಸಿಂಗ್ ಹೇಳಿದರು.