Wednesday, November 30, 2022

Latest Posts

ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದು ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರಲ್ಲ: ಸಚಿವ ನಿರಾಣಿ

ಹೊಸ ದಿಗಂತ ವರದಿ, ಕಲಬುರಗಿ:

ಬಿಜೆಪಿ ವತಿಯಿಂದ ಕಲಬುರಗಿಯಲ್ಲಿ ಅ.30ರಂದು ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಓಬಿಸಿ ಸಮಾವೇಶ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ‌ ನಿರಾಣಿ ಅವರು ಕಾರ್ಯಕ್ರಮ‌ ನಡೆಯುವ ಸ್ಥಳದ ಪರಿಶೀಲನೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರುವುದು ಬಿಜೆಪಿ ಮೇಲೆ ಯಾವುದೇ ಪರಿಣಾಮ ಬಿರಲ್ಲ. ಅವರ ತತ್ವ ಸಿದ್ದಾಂತವೇ ಬೇರೆ ನಮ್ಮ ತತ್ವ ಸಿದ್ದಾಂತವೇ ಬೇರೆ ಇದೆ. ಈ ಹಿಂದೆಯೂ ಅವರು ಹಲವು ಹುದ್ದೆಗಳು ಅಲಂಕರಿಸಿದ್ದರು. ಆದರೂ, ಯಾವುದೇ ಪರಿಣಾಮ ಬೀರಲ್ಲ. ಹೀಗಾಗಿ ರಾಜ್ಯದ ಮೇಲೆ ಝೀರೋ ಎಫೆಕ್ಟ್ ಎಂದು ಹೇಳಿದರು.

ಕಾಂಗ್ರೆಸ್ ನ ಭಾರತ ಜೋಡೊ ಪಾದಯಾತ್ರೆಯಿಂದ ಯಾವ ಪ್ರಯೋಜನ ಆಗಿಲ್ಲ. ಕಾಂಗ್ರೆಸ್ ನಡಿಗೆ ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಆಗಿದೆ ಎಂದು ವ್ಯಂಗ್ಯವಾಡಿದರು. ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಸಿ, ನಮ್ಮ‌ ಸರ್ಕಾರ ಎಲ್ಲಾ ವರ್ಗದ ಜನರ ಜೊತೆ ಇರುತ್ತದೆ. ನಮ್ಮ ಎದುರಿಗೆ ಈಗ ಮುಖ್ಯವಾಗಿರುವುದು ಸರ್ಕಾರದ ಸಾಧನೆ ಜನರಿಗೆ ತಲುಪಿಸುವುದು ಎಂದು ಹೇಳಿದರು.

ಬಿಜೆಪಿ ಪಕ್ಷದ ಹಿಂದುಳಿದ ವರ್ಗಗಳ ಜಾಗೃತಿ ವಿರಾಟ ಸಮಾವೇಶದ ಪೂರ್ವ ಸಿದ್ಧತೆಗಳ ನಡೆಯುತ್ತಿವೆ. 3 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಈ ಕಾರ್ಯಕ್ರಮ  ಪಕ್ಷಕ್ಕೆ ತಳಮಟ್ಟದಿಂದ ಹೆಚ್ಚು ಬಲವನ್ನು ತುಂಬಲಿದೆ. ಪ್ರಜಾ ಕಲ್ಯಾಣವೇ ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ.

ಸಮಾವೇಶದಲ್ಲಿ ಮದ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ , ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!