‘ನಾವು ಗೆಲುವಿನತ್ತ ಮುಂದುವರಿದಿದ್ದೇವೆ, ಎಲ್ಲವೂ ಮೊದಲಿನಂತೆ ಆಗಲಿದೆ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖಾರ್ಕಿವ್ ನಗರ ಇದೀಗ ಮತ್ತೆ ಸುದ್ದಿಯಲ್ಲಿದೆ, ರಷ್ಯಾ ನಡೆಸಿದ ದಾಳಿಗೆ ತತ್ತರಿಸಿದ್ದ ಖಾರ್ಕಿವ್‌ನ್ನು ಮತ್ತೆ ತನ್ನ ಸುಪರ್ದಿಗೆ ಪಡೆಯುವಲ್ಲಿ ಉಕ್ರೇನ್ ಯಶಸ್ವಿಯಾಗಿದೆ.

ಮರುವಶಕ್ಕೆ ಪಡೆದ ಖಾರ್ಕಿವ್‌ನಲ್ಲಿ ಉಕ್ರೇನ್ ಧ್ವಜ ಹಾರಿಸಲು ವಿಶೇಷ ಸಮಾರಂಭ ಆಯೋಜಿಸಿದ್ದು, ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪಾಲ್ಗೊಂಡಿದ್ದರು. ಖಾರ್ಕಿವ್ ಮತ್ತೆ ಉಕ್ರೇನ್ ವಶಕ್ಕೆ ಬಂದಿದೆ. ಇದು ಯುದ್ಧದಲ್ಲಿ ಪ್ರಮುಖ ಬೆಳವಣಿಗೆ. ನಾವು ಗೆಲುವಿನತ್ತ ಮುಂದುವರಿದಿದ್ದೇವೆ, ಎಲ್ಲವೂ ಮೊದಲಿನಂತೆ ಆಗಲಿದೆ ಎಂದು ಹೇಳಿದ್ದಾರೆ.

200 ದಿನಗಳ ಹಿಂದೆ ಖಾರ್ಕಿವ್‌ನಲ್ಲಿ ರಷ್ಯಾ ಶೆಲ್ ದಾಳಿ ನಡೆಸಿ, ತನ್ನವಶಕ್ಕೆ ಪಡೆದುಕೊಂಡಿತ್ತು. ಇದೀಗ ಉಕ್ರೇನ್ ಚುರುಕು ಕಾರ್ಯಾಚರಣೆ ನಡೆಸಿ ತನ್ನ ಪ್ರಾಂತ್ಯವನ್ನು ವಾಪಾಸ್ ಪಡೆದಿದೆ. ಇದೇ ಪ್ರಾಂತ್ಯಕ್ಕಾಗಿ ರಷ್ಯಾ ಹಾಗೂ ಉಕ್ರೇನ್ ನಡುವೆ ಕಾದಾಟ ಮುಂದುವರಿದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!