ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ನಾಯಕಿ, ನಟಿ ಖುಷ್ಬೂ ವಿಪರೀತ ಜ್ವರ ಹಾಗೂ ತುಂಬಾ ನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಇತ್ತ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.
ನಿನ್ನೆಯಿಂದಲೇ ಹೈದರಾಬಾದ್ ಆಸ್ಪತ್ರೆಯ (Hospital) ಮುಂದೆ ಅಭಿಮಾನಿಗಳು ಜಮಾಯಿಸಿ, ನಟಿಯ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳ ಆತಂಕವನ್ನು ಗಮನಿಸಿದ ಖುಷ್ಬೂ ತಮ್ಮ ಆರೋಗ್ಯದ ಅಪ್ ಡೇಟ್ ಕೊಟ್ಟಿದ್ದಾರೆ.
ವಿಪರೀತ ಜ್ವರದಿಂದ ಬಳಲಿ ಹೋಗಿದ್ದೆ. ಅಸಾಧರಣ ನೋವಿತ್ತು. ನನ್ನಿಂದ ತಡೆದುಕೊಳ್ಳಲು ಆಗದೇ ಆಸ್ಪತ್ರೆಗೆ ದಾಖಲಾದೆ. ಈಗ ಜ್ವರ ಕಡಿಮೆ ಆಗಿದೆ. ಆರೋಗ್ಯ ಸುಧಾರಿಸುತ್ತಿದೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ನನಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಖುಷ್ಬೂ ಅವರು ಜ್ವರ ಮತ್ತು ಬಾಡಿ ವೀಕ್ನೆಸ್ನಿಂದ ಬಳಲುತ್ತಿದ್ದರಂತೆ. ಈ ಬಗ್ಗೆ ಸ್ವತಃ ಸೋಷಿಯಲ್ ಮೀಡಿಯಾ ಮೂಲಕ ನಟಿ ತಿಳಿಸಿದ್ದರು.