ಖುಷ್ಬೂ ಸುಂದರ್ ‘ಎಕ್ಸ್’ ಖಾತೆ ಹ್ಯಾಕ್: ನನ್ನ ಹೆಸರು ನೋಡಿ ವಂಚನೆಗೆ ಒಳಗಾಗಬೇಡಿ ಎಂದ ನಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿರಿಯ ನಟಿ ಖುಷ್ಬೂ ಸುಂದರ್ ಅವರ ಎಕ್ಸ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ.

ಖುಷ್ಬೂ ಖಾತೆಯಲ್ಲಿ ಅನುಮಾನಾಸ್ಪದ ಸಂದೇಶಗಳನ್ನು ಪೋಸ್ಟ್ ಮಾಡಲಾಗಿತ್ತು. ಇದನ್ನು ನೋಡಿದ ಫ್ಯಾನ್ಸ್ ನಟಿಯ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಖುಷ್ಬೂ ಕೂಡ ಇನ್ಸ್ಟಾಗ್ರಾಮ್​​ನಲ್ಲಿ ಪ್ರತಿಕ್ರಿಯಿಸಿ, ನನ್ನ ಎಕ್ಸ್​ ಖಾತೆ ಹ್ಯಾಕ್​ ಆಗಿದೆ. ಹಲವು ಬಾರಿ ಲಾಗಿನ್ ಆಗಲು ಪ್ರಯತ್ನಿಸಿದರು ಸಾಧ್ಯವಾಗಿಲ್ಲ. ನನ್ನ ಐಡಿ ಮತ್ತು ಪಾಸ್‌ ವರ್ಡ್ ಬಳಸಲು ನನಗೆ ಆಗುತ್ತಿಲ್ಲ ಎಂದು ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನು ತನ್ನ ಖಾತೆಯಲ್ಲಿ ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ಪೋಸ್ಟ್‌ ಗಳನ್ನು ಹ್ಯಾಕರ್ ಪೋಸ್ಟ್ ಮಾಡುತ್ತಿದ್ದು ತಾನು ಅಂತಹ ವಿಷಯಗಳನ್ನು ಪ್ರಚಾರ ಮಾಡುತ್ತಿಲ್ಲ. ತನ್ನ ಹೆಸರನ್ನು ಬಳಸಿಕೊಂಡು ಯಾರಾದರೂ ವಂಚಿಸಿದರೆ ತಕ್ಷಣ ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.

ಇತ್ತೀಚೆಗೆ, ಗಾಯಕಿ ಶ್ರೇಯಾ ಘೋಷಾಲ್, ಮಂಚು ಲಕ್ಷ್ಮಿ ಮತ್ತು ತ್ರಿಶಾ ಅವರಂತಹ ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸಹ ಹ್ಯಾಕ್ ಮಾಡಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!