ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಕೆಲವೇ ಕ್ಷಣದಲ್ಲಿ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಖುಷಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಜನರಿಗೆ ಸಿಹಿ ಊಟ ನೀಡಲಾಗುತ್ತಿದೆ.
ಬಾಗಲಕೋಟೆಯಲ್ಲಿ ಟ್ರಸ್ಟ್ ಒಂದು ಹೋಳಿಗೆ ಸ್ಪಾನ್ಸರ್ ಮಾಡಿದ್ದು, 10 ರೂಪಾಯಿಗೆ ಹೋಳಿಗೆ ಊಟ ದೊರೆಯುತ್ತಿದೆ, ಹೋಳಿಗೆ, ಅನ್ನ, ಸಾಂಬಾರ್ ಹಾಗೂ ಮೊಸರನ್ನ ಮೀಲ್ಸ್ ದೊರೆಯುತ್ತದೆ.