Sunday, June 4, 2023

Latest Posts

ಜ. 14ರಿಂದ ಕಿಯಾ ಕ್ಯಾರೆನ್ಸ್ ಬುಕ್ಕಿಂಗ್ ಪ್ರಾರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್

ಆಟೋಮೊಬೈಲ್ ತಯಾರಕ ಕಿಯಾ ಮೋಟಾರ್ಸ್ ಇಂಡಿಯಾ ತನ್ನ ಮುಂಬರುವ ಕಾರು ಕ್ಯಾರೆನ್ಸ್‌ಗಾಗಿ ಜ. 14ರಿಂದ ಬುಕ್ಕಿಂಗ್ ಪ್ರಾರಂಭಿಸುತ್ತಿದೆ. ಕಂಪನಿ ಮಂಗಳವಾರ ಈ ಮಾಹಿತಿಯನ್ನು ನೀಡಿದೆ.

ಹೊಸದಾಗಿ ಬಿಡುಗಡೆ ಆಗಲಿರುವ ಎಂಪಿವಿ ಕಿಯಾ ಕ್ಯಾರೆನ್ಸ್ ಕಾರು, ಈಗಾಗಲೇ ಮಾರುಕಟ್ಟೆಯಲ್ಲಿರುವ ಹ್ಯುಂಡೈ ಅಲ್ಕಾಜರ್, ಮಾರುತಿ ಸುಜುಕಿ ಎಕ್ಸ್‌ಎಲ್6, ಟಾಟಾ ಸಾರಿ, ಟೊಯೊಟಾ ಇನ್ನೋವಾ ಕ್ರಿಸ್ಟಾ ಮತ್ತು ಮಹೀಂದ್ರಾ ಮರಾಜೊ ಮುಂತಾದ ಕಾರುಗಳೊಂದಿಗೆ ಸ್ಪರ್ಧೆಗೆ ಇಳಿಯಲಿದೆ.

ಕ್ಯಾರೆನ್ಸ್ ವಿಶೇಷತೆಗಳೇನು?
ಕಿಯಾ ಕ್ಯಾರೆನ್ಸ್ ಅನ್ನು ಐದು ವಿಭಿನ್ನ ಮಾದರಿಗಳಲ್ಲಿ ನೀಡಲಾಗುತ್ತದೆ. ಇದರಲ್ಲಿ ಪ್ರೀಮಿಯಂ, ಪ್ರೆಸ್ಟೀಜ್, ಪ್ರೆಸ್ಟೀಜ್ ಪ್ಲಸ್, ಲಕ್ಷ್ಯುರಿ ಮತ್ತು ಲಕ್ಷ್ಯುರಿ ಪ್ಲಸ್ ಸೇರಿವೆ. ಈ ಮಾದರಿಗಳನ್ನು ಆರು ಮತ್ತು ಏಳು ಸೀಟ್‌ಗಳೊಂದಿಗೆ ವಿವಿಧ ಪವರ್‌ಟ್ರೇನ್ ಎಂಜಿನ್‌ಗಳ ಆಯ್ಕೆಯೊಂದಿಗೆ ನೀಡಲಾಗುವುದು. ಕ್ಯಾರೆನ್ಸ್ ಪ್ರೀಮಿಯಂ ಎಸ್‌ಯುವಿಗಳ ಸ್ಟೈಲ್ ಹೊಂದಿದೆ.

ಕಂಪನಿಯ ಪ್ರಕಾರ, ಕಿಯಾ ಕ್ಯಾರೆನ್ಸ್‌ನ ಎಲ್ಲ ಮಾದರಿಗಳು ಸುರಕ್ಷತಾ ಪ್ಯಾಕೇಜ್‌ನೊಂದಿಗೆ ಬರುತ್ತವೆ. ಗ್ರಾಹಕರು 1500 ಸಿಸಿ ಪೆಟ್ರೋಲ್, 1400 ಸಿಸಿ ಪೆಟ್ರೋಲ್ ಮತ್ತು 1500 ಸಿಸಿ ಡೀಸೆಲ್ ಎಂಜಿನ್ ಹೊಂದಿರುವ ಮಾದರಿಗಳನ್ನು ಖರೀದಿಸುವ ಆಯ್ಕೆಯನ್ನು ಹೊಂದಿರುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!