ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ತೆಲುಗು ಪ್ರೇಕ್ಷಕರಿಗೂ ಚಿರಪರಿಚಿತ. ಮಹೇಶ್ ಬಾಬು ಅಭಿನಯದ ‘ಭರತ್ ಅನೆ ನೇನು’ ಮತ್ತು ರಾಮ್ ಚರಣ್ ಜೊತೆ ‘ವಿನಯ ವಿಧೇಯ ರಾಮ’ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಬಾಲಿವುಡ್ನಲ್ಲಿ ಬ್ಯುಸಿಯಾಗಿರುವ ಕಿಯಾರಾ ಮದುವೆ ಬಗ್ಗೆ ಸುದ್ದಿ ಹರಿದಾಡುತ್ತಿತ್ತು. ಎಲ್ಲದರ ಬಗ್ಗೆ ಕಿಯಾರಾ ಕ್ಲಾರಿಟಿ ಕೊಟ್ಟಿದ್ದಾರೆ.
ಆಕೆ ಬಾಲಿವುಡ್ ಹೀರೋ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಕೇಳಿ ಬರುತ್ತಿದೆ. ಆದರೆ ಈ ಚೆಲುವೆ ಈ ಸುದ್ದಿಯನ್ನು ಯಾವತ್ತೂ ಅಲ್ಲಗಳೆದಿರಲಿಲ್ಲ. ಆದರೆ, ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಟಾಕ್ ಶೋನಲ್ಲಿ ಸಿದ್ಧಾರ್ಥ್ ಜೊತೆಗಿನ ಸಂಬಂಧದ ಬಗ್ಗೆ ಕಿಯಾರಾ ಮಾತನಾಡಿದ್ದಾರೆ. ʻನಾನು ಮತ್ತು ಸಿದ್ಧಾರ್ಥ್ ಒಳ್ಳೆಯ ಸ್ನೇಹಿತರು. ಅದಕ್ಕೂ ಮೀರಿದ ಯಾವುದೇ ಸಂಬಂಧ ನಮ್ಮಿಬ್ಬರ ಮಧ್ಯದಲ್ಲಿ ಇಲ್ಲʼ ಎಂದು ಕಡ್ಡಿ ಮುರಿದಂತೆ ಹೇಳಿದ್ದಾಳೆ
ಕಿಯಾರಾ ಸಿದ್ಧಾರ್ಥ್ ಜೊತೆ ಲಿವಿಂಗ್ ರಿಲೇಷನ್ನಲ್ಲಿದ್ದಾರೆ ಎಂದು ಭಾವಿಸಿದ್ದ ಅಭಿಮಾನಿಗಳಿಗೆ ಇದು ಪ್ರಶ್ನೆಯಾಗಿಯೇ ಉಳಿದಿದೆ. ಕಿಯಾರಾ ಅವರ ಕಾಮೆಂಟ್ನಿಂದ ಅಭಿಮಾನಿಗಳು ಶಾಕ್ ಆಗಿದ್ದಾರೆ.