ಮೀಮ್ ನೋಡೋಕೆ ದಿನದ ಅರ್ಧತಾಸು ವ್ಯಯಿಸ್ತಿದಾರೆ ಭಾರತದ ಜನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹೊಸಯುಗದ ಮನರಂಜನೆಯೆಂದೇ ಗುರುತಿಸಕೊಂಡಿರುವ ಮೀಮ್ಸ್‌ ಗಳನ್ನು ನೀವು ಖಂಡಿತ ನೋಡಿರುತ್ತೀರಿ, ಕೆಲವೊಮ್ಮೆ ನಕ್ಕಿರುತ್ತೀರಿ. ಇಂಟರ್‌ ನೆಟ್‌ ಜಮಾನಾದಲ್ಲಿ ಹಾಸ್ಯಕ್ಕಾಗಿ, ಮಾಹಿತಿ ವಾಹಕಗಳಾಗಿ, ವಿಡಂಬನೆಗಾಗಿ ಕೆಲವೊಮ್ಮೆ ಟೀಕೆಗಳೂ ಮೀಮ್ಸ್‌ ಗಳಲ್ಲಿ ಟೀಕೆ ವ್ಯಕ್ತವಾಗುತ್ತಿರುತ್ತವೆ. ಹಾಗಾಗಿಯೇ ಮೀಮ್ಸ್‌ ಗಳು ನವಯುಗದ ನೆಚ್ಚಿನ ಸಂಗತಿಗಳಾಗಿ ಬಿಟ್ಟಿವೆ. ಇವುಗಳ ಜನಪ್ರಿಯತೆ ಎಷ್ಟಿಯೆಂದರೆ ನಮ್ಮದೇಶದಲ್ಲಿ ಜನರು ದಿನವೊಂದದಕ್ಕೆ 30 ನಿಮಿಶಗಳಷ್ಟನ್ನು ಕೇವಲ ಮೀಮ್ಸ್‌ ನೋಡುವುದಕ್ಕೆಂದೇ ವ್ಯಯಿಸುತ್ತಾರಂತೆ.

ರೆಡ್‌ಸೀರ್‌ ಎನ್ನೋ ಸಂಸ್ಥೆಯೊಂದರ ವರದಿಯ ಪ್ರಕಾರ ಭಾರತೀಯ ಸ್ಮಾರ್ಟ್‌ಫೋನ್ ಬಳಕೆದಾರರು ದಿನಕ್ಕೆ 30 ನಿಮಿಷಗಳ ಕಾಲ ಮೀಮ್‌ಗಳನ್ನು ನೋಡುತ್ತಿದ್ದಾರೆ. ಶೇಕಡಾ 80 ರಷ್ಟು ಜನರು ಕಳೆದ ವರ್ಷದಲ್ಲಿ ಮೀಮ್ ಗಳ ಬಳಕೆಯನ್ನು ಹೆಚ್ಚಿಸಿದ್ದಾರೆ ಎನ್ನಲಾಗಿದದೆ. ಅಲ್ಲದೇ ಇನ್ನೂ ಕೆಲವರು ಮೀಮ್‌ ಗಳನ್ನು ನೋಡಲು ಹೆಚ್ಚಿನ ಸಮಯ ಕೊಡೋಕೆ ಇಷ್ಟಪಡುತ್ತಾರಂತೆ.

ಹೀಗಾಗಿಯೇ ಮೀಮ್‌ ಗಳ ಬೇಡಿಕೆ ಹೆಚ್ಚಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಮೀಮರ್ಸ್‌ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ದೊಡ್ಡ ದೊಡ್ಡ ಕಂಪನಿಗಳಿಂದ ಹಿಡಿದು ಅತಿ ಪುಟ್ಟ ವ್ಯವಹಾರ ಮಾಡುವವರು ಮಾರ್ಕೆಟಿಂಗ್ ಗಾಗಿ ಅಥವಾ ಪ್ರಚಾರಕ್ಕಾಗಿ ಮೀಮ್‌ ಗಳ ಮೊರೆ ಹೋಗುತ್ತಿದ್ದಾರೆ. ಅಲ್ಲದೇ ಇಂದು ಮೀಮ್‌ ಗಳನ್ನು ರಚಿಸುವ ಬೇರೆ ಬೇರೆ ವೇದಿಕೆಗಳು, ಅಪ್ಲಿಕೇಷನ್‌ ಗಳು ಹೊರಬರುತ್ತಿವೆ. ಪ್ರಸಿದ್ಧ ಮೀಮರ್ಸ್‌ ಗಳ ಮೀಮ್‌ ಗಳೆಲ್ಲ ನಿರ್ದಿಷ್ಟ ಮಟ್ಟದ ಮಾರುಕಟ್ಟೆ ಮೌಲ್ಯವನ್ನು ಕಂಡುಕೊಳ್ಳಲೂ ಶಕ್ತವಾಗಿದೆ. ನವಯುಗದ ಯುವಕರ ಸೃಜನ ಶೀಲತೆಯ ಹೀಗೆ ಮೀಮ್ಸ್‌ ಗಳ ವ್ಯಾಪಕವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಆವರಿಸಿಕೊಳ್ಳುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!