ಸೋಮಣ್ಣ ಪರ ಕಿಚ್ಚ ಸುದೀಪ್ ಭರ್ಜರಿ ಪ್ರಚಾರ

ಹೊಸದಿಗಂತ ವರದಿ, ಚಾಮರಾಜನಗರ:

ಚಾಮರಾಜನಗರ ವಿಧಾನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ಚಿತ್ರನಟ ಸುದೀಪ್ ಅಪಾರ ಜನಸಾಗರದೊಂದಿಗೆ ನಗರದಲ್ಲಿ ಅಬ್ಬರದ ಬಿರುಸಿನ ಮತಯಾಚನೆ ಮಾಡಿದರು.

ಗುಂಡ್ಲುಪೇಟೆಯಿoದ ಚಾಮರಾಜನಗರಕ್ಕೆ ಆಗಮಿಸಿದ ಸುದೀಪ್ ನಗರದ ಗುಂಡ್ಲುಪೇಟೆ ವೃತ್ತದಲ್ಲಿ ಪ್ರಚಾರ ವಾಹನವೇರಿದರು. ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ವಿ.ಸೋಮಣ್ಣ ಅವರನ್ನು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ನಂತರ ಕಾರಿನಲ್ಲಿ ಸಂತೇಮರಹಳ್ಳಿ ವೃತ್ತಕ್ಕೆ ತೆರಳಿ ತಮ್ಮ ಕಾರ್ ಮೇಲೆ ಏರಿಸಿ ಅಭಿಮಾನಿಗಳತ್ತ ಬೀಸಿ, ಕೈ ಮುಗಿದರು ನಂತರ ವಿ.ಸೋಮಣ್ಣ ಅವರನ್ನು ಕಾರ್ ಮೇಲೆ ಹತ್ತಿಸಿಕೊಂಡು ಅಪ್ಪಿಕೊಂಡು ಇಬ್ಬರು ಕೈಗಳನ್ನು ಮೇಲೆ ಕಾರ್ಯಕರ್ತರತ್ತ, ಅಭಿಮಾನಿಗಳತ್ತ ಕೈ ಬೀಸಿ ವಿ.ಸೋಮಣ್ಣ ಬೆಂಬಲಿಸುವoತೆ ಮನವಿ ಮಾಡಿದರು. ನಂತರ ಕ್ರೇನ್‌ನಿಂದ ಬಾರಿಗಾತ್ರದ ಸೇಬಿನ ಹಾರಹಾಕಿ ಕಿಚ್ಚಸುದೀಪ್ ಅವರನ್ನು ಸ್ವಾಗತಿಸಲಾಯಿತು.

ಕಿಚ್ಚನ ನೋಡಲು ಮರ, ಮನೆ, ಮಹಡಿ, ಬಸ್ ಹೇರಿದ ಅಭಿಮಾನಿಗಳು : ಚಿತ್ರನಟ ಸುದೀಪ್ ಅವರನ್ನು ನೋಡಲು ತಾಲೂಕಿನ ಹಳ್ಳಿಗಳಿಂದ ಬಂದಿದ್ದ ಅಭಿಮಾನಿಗಳು, ಕಾರ್ಯಕರ್ತರು, ಜನತೆ ಮರ, ಮಹಡಿ ಮನೆ, ಬಸ್ ಹಾಗೂ ಇನ್ನಿತರ ವಾಹನಗಳನ್ನೇರಿ ಸುದೀಪ್ ನೋಡಿ ಸಂತಸಪಟ್ಟರು. ಬಿಜೆಪಿ ಭಾವುಟ, ಸುದೀಪ್ ಭಾವಚಿತ್ರಯುಳ್ಳು ಭಾವುಟ ಹಿಡಿದು ಕಿಚ್ಚ ಸುದೀಪ್ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. ಆದರೆ ಕೆಲವರು ಸುದೀಪ್ ಅವರನ್ನು ನೋಡುವ ಬರದಲ್ಲಿ ಪಾದರಕ್ಷೆ ಕಳೆದುಕೊಂಡರು. ನಗರದಲ್ಲಿ ಸುದೀಪ್ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವ ಮೂಲಕ ದಾಖಲೆ ನಿರ್ಮಿಸಿದರು.

ಪ್ರಚಾರದಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಮುಖಂಡ ಕೆಲ್ಲಂಬಳ್ಳಿ ಸೋಮನಾಯಕ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಗಲಶಿವಕುಮಾರ್, ನಗರಸಭಾ ಸದಸ್ಯ ಶಿವರಾಜ್, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವುವಿರಾಟ್, ಎಪಿಎಂಸಿ ಅಧ್ಯಕ್ಷ ಮನೋಜ್‌ಪಟೇಲ್, ಮುಖಂಡರಾದ ನಟರಾಜು, ಕೃಷ್ಣನಾಯಕ, ಚಂದ್ರಶೇಖರ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!