ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನಟ ಕಿಚ್ಚ ಸುದೀಪ ಜನ್ಮದಿನ, ಈ ದಿನದಂದು ನಮ್ಮ ಮನೆ ಮುಂದೆ ಅಥವಾ ನಮ್ಮ ಏರಿಯಾ ಬಳಿ ಬರಬೇಡಿ ಎಂದು ಸುದೀಪ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.
ಆದರೆ ಫ್ಯಾನ್ಸ್ ಕಿಚ್ಚನ ಮಾತಿಗೆ ಕ್ಯಾರೆ ಅನ್ನದೆ ತಮ್ಮ ನೆಚ್ಚಿನ ಸೆಲೆಬ್ರಿಟಿಯನ್ನು ನೋಡಲು ಮನೆ ಮುಂದೆ ಆಗಮಿಸಿದ್ದಾರೆ. ಜನ, ಸದ್ದಿಗೆ ಅಕ್ಕಪಕ್ಕದ ಮನೆಯವರು ಕಂಪ್ಲೆಂಟ್ ಮಾಡಿದ್ದು, ಅನಿವಾರ್ಯವಾಗಿ ಸುದೀಪ ಮನೆಯಿಂದ ಹೊರಬರಬೇಕಾಗಿದೆ.
ಮನೆಯಿಂದ ಹೊರಬಂದು ಜನರಿಗೆ ಹೈ ಹೇಳಿ ಹೋಗಿದ್ದಾರೆ. ಮನೆಯ ಬಳಿ ಸಾಗರದಷ್ಟು ಜನ ಜಮಾಯಿಸಿದ್ದು, ಸುದೀಪ್ ಫ್ಯಾನ್ ಕ್ರೇಝ್ ಎಂಥದ್ದು ಎಂದು ಹೇಳಿದೆ.