ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಮಕೂರು ವಿಶ್ವ ವಿದ್ಯಾಲಯವು ನೀಡಲು ಇಚ್ಚಿಸಿದ ಗೌರವ ಡಾಕ್ಟರೇಟ್ ಅನ್ನು ಸ್ವೀಕರಿಸಲು ನಟ ಕಿಚ್ಚ ಸುದೀಪ್ ನಿರಾಕರಿಸಿದ್ದಾರೆ.
ವಿಶ್ವ ವಿದ್ಯಾಲಯವು ಸುದೀಪ್ ಅವರಿಗೆ ಕರೆ ಮಾಡಿ ಗೌರವ ಡಾಕ್ಟರೇಟ್ ಆಯ್ಕೆಯ ವಿಷಯ ತಿಳಿಸಿದಾಗ, ‘ನನಗಿಂತಲೂ ಅರ್ಹರು ಸಾಕಷ್ಟು ಜನರು ಇದ್ದಾರೆ. ಅವರಿಗೆ ಈ ಗೌರವ ನೀಡಿ ಎಂದು ನಯವಾಗಿಯೇ ಗೌರವನ್ನು ನಿರಾಕರಿಸಿದ್ದಾರೆ. ಈ ಮೂಲಕ ರಾಹುಲ್ ದ್ರಾವಿಡ್ ಪರಂಪರೆಯನ್ನು ಮುಂದುವರೆಸಿದ್ದಾರೆ.
ಈ ಹಿಂದೆ ಖ್ಯಾತ ಕ್ರಿಕೆಟ್ ಗೆ ರಾಹುಲ್ ದ್ರಾವಿಡ್ ಅವರಿಗೂ ಗೌರವ ಡಾಕ್ಟರೇಟ್ ನೀಡಲು ವಿವಿ ನಿರ್ಧಾರ ಮಾಡಿತ್ತು. ಸುದೀಪ್ ಹೇಳಿದ ಮಾತುಗಳನ್ನೂ ಇವರು ಹೇಳಿ ಗೌರವ ಡಾಕ್ಟರೇಟ್ ನಿರಾಕರಿಸಿದ್ದರು.
ಸುದೀಪ್ ಈ ನಡೆ ಭಾರೀ ಮೆಚ್ಚುಗೆಗೆ ಕಾರಣವಾಗಿದೆ. ಅನೇಕರು ರಾಹುಲ್ ದ್ರಾವಿಡ್ ಅವರಿಗೆ ಕಿಚ್ಚನ ಹೋಲಿಕೆ ಮಾಡಿ ಪೋಸ್ಟ್ ಮಾಡ್ತಿದ್ದಾರೆ. ಈ ನಿರ್ಧಾರವನ್ನು ಎಲ್ಲವೂ ಗೌರವಿಸುತ್ತೇವೆ ಎಂದಿದ್ದಾರೆ.