Tuesday, August 16, 2022

Latest Posts

ವಿಶ್ವದಾದ್ಯಂತ ವಿಕ್ರಾಂತ್‌ ರೋಣ ರಿಲೀಸ್:‌ ಹೇಗಿದೆ ವೀಕ್ಷಕರ ರೆಸ್ಪಾನ್ಸ್?‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಸಿನಿಮಾ ಇಂದು ಪ್ರಪಂಚದಾದ್ಯಂತ ಬಿಡಗಡೆಯಾಗಿದೆ. ನಿರ್ದೇಶಕ ಅನುಪ್ ಭಂಡಾರಿ ನಿರ್ದೇಶನದ ಈ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತಿಯಾಗಿದ್ದು, ಕಿಚ್ಚನ ಅಭಿಮಾನಿಗಳು ಹಬ್ಬ ಮಾಡುತ್ತಿದ್ದಾರೆ. ಬೆಳಗ್ಗೆ ಏಳು ಗಂಟೆಗೆ ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನವಾಗಿದ್ದು, ಅಭಿಮಾಬಿಗಳ ಸಂಭ್ರಮಕ್ಕೆ ಎಲ್ಲೆ ಇಲ್ಲದಂತಾಗಿತ್ತು.

ಥಿಯೇಟರ್‌ ಬಳಿ ರಾರಾಜಿಸುತ್ತಿದ್ದ ಸುದೀಪ್‌ ಕಟೌಟ್‌ಗಳು, ಥಿಯೇಟರ್‌ ಪೂರ್ತಿ ಅಭಿಮಾನಿಗಳಿಂದ ಕಿಕ್ಕರಿದು ತುಂಬಿತ್ತು. ಮೊದಲ ದಿನ 2500ಕ್ಕೂ ಅಧಿಕ ಸ್ಕ್ರೀನ್ನಲ್ಲಿ ವಿಕ್ರಾಂತ್ ರೋಣ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಎಲ್ಲಾ ಶೋಗಳು ಭರ್ತಿಯಾಗಿದ್ದು, ಸಿನಿಮಾ ನೋಡಲು ಜನ ಕ್ಯೂ ಕಟ್ಟಿ ನಿಂತಿದ್ದಾರೆ.

ಸುಮಾರು 95 ಕೋಟಿ ರೂಪಾಯಿ ಬಜೆಟ್ ಸಿನಿಮಾವನ್ನು  ನೋಡಿದ ಕೆಲವರು ಸುದೀಪ್ ಕೆರಿಯರ್ ನಲ್ಲಿ ಅದ್ಧೂರಿಯಾಗಿ ತೆರೆಕಂಡಿರುವ ಸಿನಿಮಾ ಎಂದು ಕಮೆಂಟ್‌ ಮಾಡುತ್ತಿದ್ದಾರೆ. ಕಿಚ್ಚನ ಅಭಿಮಾನಿಗಳು ಸಿನಿಮಾವನ್ನು ಇದೊಂದು ಮಾಸ್ಟರ್‌ ಪೀಸ್‌ ಸಿನಿಮಾ, ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ಅಲ್ಲದೆ ಎಲ್ಲರೂ 3Dಯಲ್ಲಿ ಸಿನಿಮಾ ನೋಡಿ ಎಂದು ಕೆಲವರು ಸಲಹೆ ನೀಡಿದ್ದಾರೆ.  ಒಂದೊಂದು ದೃಶ್ಯವೂ ಅದ್ಭುತವಾಗಿದ್ದು, ನೋಡಲೇಬೇಕಾದ ಸಿನಿಮಾ ಎಂದಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss