ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಿಚ್ಚಸುದೀಪ್ಗೆ ಇಂದು ಜನ್ಮದಿನದ ಸಂಭ್ರಮ. ೫೦ರ ವಸಂತಕ್ಕೆ ಸುದೀಪ್ ಕಾಲಿಟ್ಟಿದ್ದು, ಅಭಿಮಾನಿಗಳ ಜತೆ ಕೂಡಿ ಭರ್ಜರಿ ಬರ್ಥ್ಡೇ ಸೆಲೆಬ್ರೇಷನ್ ನಡೆದಿದೆ.
ಬೆಂಗಳೂರಿನ ನಂದಿಗ್ರೌಂಡ್ಸ್ನಲ್ಲಿ ಕಿಚ್ಚನ ಬರ್ಥ್ಡೇ ಸೆಲೆಬ್ರೇಟ್ ಮಾಡಿದ್ದು, ಪತ್ನಿ ಪ್ರಿಯಾ, ಮಗಳು ಸಾನ್ವಿ ಹಾಗೂ ಸ್ನೇಹಿತರು ಸಾಥ್ ನೀಡಿದ್ದಾರೆ.
ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದು, ಮಧ್ಯಾರಾತ್ರಿ ೧೨ ಗಂಟೆಗೆ ಕೇಕ್ ಕತ್ತರಿಸಲಾಗಿದೆ. ಡ್ರೋನ್ ಲೈಟಿಂಗ್ ಮೂಲಕ ಪ್ರಿಯಾ ಸುದೀಪ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಜೆಪಿ ನಗರದ ಸುದೀಪ್ ನಿವಾಸದಲ್ಲಿಯೂ ಇಂದು ಕೇಕ್ ಕಟ್ ಮಾಡಿ ಸಂಭ್ರಮಿಸಲಾಗುತ್ತಿದೆ.